ವಾರಸುದಾರರಿಗೆ ಸೂಚನೆ
Update: 2020-10-15 21:29 IST
ಉಡುಪಿ, ಅ.15: ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವೀರಭದ್ರ (70) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು, ಇವರ ವಾರಸುದಾರರು ಇದ್ದಲ್ಲಿ ಜಿಲ್ಲಾ ನಾಗರಿಕ ಸಹಾಯ ಕೇಂದ್ರ ದೂರವಾಣಿ ಸಂಖ್ಯೆ: 0820-2520555/ 9449827833 ಸಂಪರ್ಕಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.