×
Ad

ಸಮುದ್ರದಲ್ಲಿ ತೂಫಾನ್: ಲಂಗರು ಹಾಕಿದ ಬೋಟ್

Update: 2020-10-15 21:38 IST

ಮಂಗಳೂರು, ಅ.15: ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ಕಡಲಿನಲ್ಲಿ ತೂಫಾನ್‌ನ ಅಬ್ಬರದಿಂದಾಗಿ ಬಹುತೇಕ ಬೋಟ್‌ಗಳು ಬಂದರ್ ದಕ್ಕೆಯಲ್ಲಿ ಲಂಗರು ಹಾಕಿದೆ.

ಗಾಳಿ ಮಳೆಗೆ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗಿದ್ದು, ಮೀನುಗಾರಿಕೆಗೆ ತೆರಳಿದ್ದ ಸಾವಿರಕ್ಕೂ ಅಧಿಕ ಬೋಟುಗಳು ವಾಪಸಾಗಿದೆ. ಹವಾಮಾನ ಇಲಾಖೆಯು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ ನೀಡಿದ ಕಾರಣ ಅ.17ರವರೆಗೆ ಕಾದು ನೋಡಲು ಮೀನುಗಾರರು ನಿರ್ಧರಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ಟ್ರಾಲ್‌ಬೋಟ್, ಪರ್ಸಿನ್, ನಾಡದೋಣಿಗಳು ಮೀನುಗಾರಿಕೆಗೆ ಇಳಿದಿಲ್ಲ. ಆಳಸಮುದ್ರ ಬೋಟುಗಳಲ್ಲಿ ಶೇ.50ರಷ್ಟು ಲಂಗರು ಹಾಕಿದೆ. ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಮೀನುಗಾರಿಕೆಯು ವಿಳಂಬವಾಗಿ ಆರಂಭಗೊಂಡಿತ್ತು. ಅ ಬಳಿಕ ಮೂರು ಬಾರಿ ತೂಫಾನ್ ಕಾಣಿಸಿಕೊಂಡ ಕಾರಣ ಮೊದಲ ಋತುವೇ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News