ಆಯುಷ್ಮಾನ್ ಕಾರ್ಡ್: ಹೆಚ್ಚಿನ ಚಿಕಿತ್ಸೆಗೆ ಅವಕಾಶ
Update: 2020-10-15 21:41 IST
ಮಂಗಳೂರು, ಅ.15:ದ.ಕ. ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಮತ್ತು ಕೋವಿಡೇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸರಕಾರ ನಿಗದಿಪಡಿಸಿರುವ ಸಮಯಾವಕಾಶದೊಳಗೆ ಗುಣಮುಖರಾಗದೆ ಇದ್ದಲ್ಲಿ ಹಾಗೂ ರೋಗ ಉಲ್ಬಣವಾದಲ್ಲಿ ನೀಡಿರುವ ಸಮಯಾವಕಾಶವನ್ನು ಎನ್‌ಹ್ಯಾನ್ಸ್‌ಮೆಂಟ್ ಮಾಡಲು ಖಾಸಗಿ ಆಸ್ಪತ್ರೆಗಳು ಅನುಮತಿ ತೆಗೆದುಕೊಳ್ಳಲು ಅವಕಾಶ ಇರುತ್ತದೆ.
ರೋಗಿಗಳಿಂದ ಯಾವುದೇ ಚಿಕಿತ್ಸಾ ವೆಚ್ಚವನ್ನು ಭರಿಸದೆ ಉಚಿತವಾಗಿ ಯೋಜನೆಯಡಿ ವೆಚ್ಚ ಭರಿಸಲು ಈ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.