×
Ad

ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2020-10-15 21:45 IST

ಸುರತ್ಕಲ್, ಅ.15: ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶಿವಳ್ಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಿವಳ್ಳಿ ಸ್ಪಂದನ ಮಂಗಳೂರು ವತಿಯಿಂದ ಸುರತ್ಕಲ್‌ನ ತಡಂಬೈಲ್ ಶ್ರೀ ದುರ್ಗಾಂಭಾದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಕ್ಷೇತ್ರದ ಅರ್ಚಕ ಲಕ್ಷ್ಮಿನಾರಾಯಣ ಭಟ್ ಆಶೀರ್ವಚನ ನೀಡಿದರು.

ಅತಿಥಿಯಾಗಿ ಎನ್‌ಐಟಿಕೆ ನಿವೃತ್ತ ಡೀನ್ ಡಾ.ಬಿ.ಆರ್.ಸಾಮಗ, ಬಾಳ ಭಾಸ್ಕರ ರಾವ್ ಮಾತನಾಡಿದರು. ಶಿವಳ್ಳಿ ಸ್ಪಂದನದ ತಾಲೂಕು ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಗಣೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

ಸುರತ್ಕಲ್ ವಲಯಾಧ್ಯಕ್ಷ ಪಾಡಿ ರಾಧಾಕೃಷ್ಣ ರಾವ್ ಸ್ವಾಗತಿಸಿದರು. ಶಿವಳ್ಳಿ ಸ್ಪಂದನ ತಾಲೂಕು ಉಪಾಧ್ಯಕ್ಷ ಬಿ.ಉದಯಶಂಕರ್ ಕಾರ್ಯಕ್ರಮ ನಿರೂಪಿಸಿದರು. ವಲಯ ಕಾರ್ಯದರ್ಶಿ ಕೃಷ್ಣರಾಜ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News