ಕಾಸರಗೋಡು : 311 ಮಂದಿಗೆ ಕೊರೋನ ಪಾಸಿಟಿವ್

Update: 2020-10-15 17:26 GMT

ಕಾಸರಗೋಡು:  ಜಿಲ್ಲೆಯಲ್ಲಿ ಗುರುವಾರ  311 ಮಂದಿಗೆ  ಕೊರೋನ ಪಾಸಿಟಿವ್ ದೃಢ ಪಟ್ಟಿದೆ.  13 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಪತ್ತೆಯಾಗಿದೆ. 303 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

283 ಮಂದಿ ಗುಣಮುಖ ರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 12347 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, 3356 ಮಂದಿ ಸದ್ಯ ಚಿಕಿತ್ಸೆಯಲ್ಲಿ ದ್ದಾರೆ. 5052 ಮಂದಿ ನಿಗಾದಲ್ಲಿದ್ದಾರೆ.

ಕಾಸರಗೋಡು : ಮಂಗಳೂರು - ಕಾಸರಗೋಡು ನಡುವೆ ಬಸ್ಸು ಸಂಚಾರಕ್ಕೆ ಅನುಮತಿ ಕೋರಿ ಕರ್ನಾಟಕ ಸಾರಿಗೆ ನಿಗಮ ಅಧಿಕಾರಿಗಳು ಸಲ್ಲಿಸಿರುವ ಮನವಿಯನ್ನು ರಾಜ್ಯ ಸರಕಾರದ ತೀರ್ಮಾನಕ್ಕೆ  ಕಳುಹಿಸಲಾಗಿದ್ದು, ರಾಜ್ಯ ಸರಕಾರ ನೀಡುವ ನಿರ್ದೇಶನ ದಂತೆ ಮುಂದಿನ ಕ್ರಮ ತೆಗೆದುಕೊಳ್ಳಲು ಗುರುವಾರ ನಡೆದ ಕೊರೋನ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಈ ಬಗ್ಗೆ ಕರ್ನಾಟಕ ಸಾರಿಗೆ ನಿಗಮದ  ನಿರ್ದೇಶಕರಿಗೆ ಪತ್ರ ಬರೆಯಲು  ಸಭೆ ತೀರ್ಮಾನಿಸಿದೆ.

ಕೊರೋನ  ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ  ನಿಯಂತ್ರಣದ  ದೃಷ್ಟಿಯಿಂದ  ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅ. 17 ರಿಂದ 26 ರ ತನಕ ನಡೆಯುವ ನವರಾತ್ರಿ ಉತ್ಸವಕ್ಕೆ ಅನುಮತಿ ನೀಡದಿರಲು ಜಿಲ್ಲಾಡಳಿತ ತೀರ್ಮಾನಿಸಿದೆ. ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ  ಕೊರೋನಾ ಸಲಹಾ  ಸಮಿತಿ ಸಭೆ ತೀರ್ಮಾನಿಸಿದೆ.

ಕಾಸರಗೋಡು ಮೀನು ಮಾರುಕಟ್ಟೆಯನ್ನು ತಾತ್ಕಾಲಿಕ ವಾಗಿ  ಬಂದ್  ಮಾಡಲು ಸಭೆ ತೀರ್ಮಾನಿಸಿದೆ.  ಮಾನದಂಡಗಳನ್ನು ಪಾಲಿಸಿ   ಯೂ ಮಾರುಕಟ್ಟೆ ಕಾರ್ಯಾಚರಿಸಲು  ಸಾಧ್ಯ ಇಲ್ಲ  ಎಂದು  ಕಾಸರಗೋಡು ನಗರಸಭಾ  ಕಾರ್ಯದರ್ಶಿ  ವರದಿ  ಸಲ್ಲಿಸಿದ್ದರು . ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ  ಮಾರುಕಟ್ಟೆ ಮುಚ್ಚು ವಂತೆ  ನಗರಸಭೆ ಯ ಮನವಿಯಂತೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಕೋವಿಡ್ ಮಾನದಂಡ ಪಾಲಿಸಿ ಮಾನದಂಡದಂತೆ ತೈಯ್ಯಂ  ಆಚಾರ  ಅನುಷ್ಠಾನಗಳಿಗೆ ಅನುಮತಿ ನೀಡಲು ಸಭೆ ತೀರ್ಮಾನಿಸಿದೆ. 20 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ . ಒಂದು ದಿನ ಒಂದೇ ಸ್ಥಳದಲ್ಲಿ ಮಾತ್ರ ಆಚರಣೆಗೆ ಅವಕಾಶ  ನೀಡಲು ತೀರ್ಮಾನಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ,  ಉಪ ಜಿಲ್ಲಾಧಿಕಾರಿ ಡಿ .ಆರ್ ಮೇಘಶ್ರೀ,  ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್, ವಾರ್ತಾಧಿಕಾರಿ ಎಂ. ಮಧುಸೂಧನನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News