ಕೊರೋನದಿಂದ ಕ್ಷಯರೋಗ ನಿರ್ಮೂಲನೆಗೆ ಬೆದರಿಕೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-10-15 18:08 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 15: ಕೊರೋನ ವೈರಸ್ ಸಾಂಕ್ರಾಮಿಕವು ಕ್ಷಯರೋಗದ ನಿರ್ಮೂಲನೆಯಲ್ಲಿ ಈವರೆಗೆ ಸಾಧಿಸಲಾಗಿರುವ ಪ್ರಗತಿಯನ್ನು ನಾಶಪಡಿಸುವ ಬೆದರಿಕೆಯನ್ನು ಒಡ್ಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ಈವರೆಗೆ ಕ್ಷಯರೋಗವು ಜಗತ್ತಿನಾದ್ಯಂತ ಅತ್ಯಂತ ಮಾರಕ ಸಾಂಕ್ರಾಮಿಕ ರೋಗವಾಗಿತ್ತು.

 ಭಾರತ ಮತ್ತು ದಕ್ಷಿಣ ಆಫ್ರಿಕ ಮುಂತಾದ ಅತಿ ಹೆಚ್ಚು ಕ್ಷಯರೋಗ ಪೀಡಿತ ದೇಶಗಳು ಕ್ಷಯರೋಗದ ಪತ್ತೆ ಮತ್ತು ಚಿಕಿತ್ಸೆಗಾಗಿ ಸಾಮಾನ್ಯವಾಗಿ ಬಿಡುಗಡೆ ಮಾಡುತ್ತಿರುವ ಹಣವನ್ನು ಈಗ ಕೊರೋನ ವೈರಸ್‌ನತ್ತ ತಿರುಗಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

 ಕ್ಷಯರೋಗಕ್ಕೆ ಚಿಕಿತ್ಸೆಯಿದ್ದರೂ ಕಳೆದ ವರ್ಷ ಜಗತ್ತಿನಾದ್ಯಂತ ಸುಮಾರು 14 ಲಕ್ಷ ಮಂದಿ ಆ ರೋಗಕ್ಕೆ ಬಲಿಯಾಗಿದ್ದರು. ಈ ವರ್ಷ ಇದಕ್ಕಿಂತಲೂ 2 ಲಕ್ಷದಿಂದ 4 ಲಕ್ಷ ಹೆಚ್ಚು ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

ಸಾಂಕ್ರಾಮಿಕದ ವಿರುದ್ಧ ಹೋರಾಡಿ; ದುರ್ಬಲರ ವಿರುದ್ಧವಲ್ಲ: ವಿಶ್ವ ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಒತ್ತಾಯ

ಜಗತ್ತಿನಾದ್ಯಂತ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಶಾಂತಿ ಕಾಪಾಡಿ ಹಾಗೂ ಸಾಂಕ್ರಾಮಿಕದ ವಿರುದ್ಧದ ಹೋರಾಟದತ್ತ ಗಮನ ನೀಡಿ, ದುರ್ಬಲರ ವಿರುದ್ಧವಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ.

‘‘ಇದು ಸಾಂಕ್ರಾಮಿಕ, ನೀವು ವೈರಸ್‌ನ ಬೆನ್ನು ಹತ್ತಿ, ದುರ್ಬಲರ ಹಿಂದೆ ಬೀಳಬೇಡಿ’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಅವರು ‘ಶಾಂತಿ’ ಎಂಬುದಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News