ಪುತ್ತೂರು: ಮಳೆಗೆ ಶಾಲಾ ಬಾವಿ ಕುಸಿತ

Update: 2020-10-16 15:13 GMT

ಪುತ್ತೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಪುತ್ತೂರು ತಾಲೂಕಿನ ಇರ್ದೆ ಉಪ್ಪಳಿಗೆ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯೊಂದು ಶುಕ್ರವಾರ ಮುಂಜಾನೆ ಸಂಪೂರ್ಣ ಕುಸಿದು ಬಿದ್ದಿದೆ.

ಸುಮಾರು 65 ವರ್ಷಗಳ ಹಿಂದಿನ ಈ ಬಾವಿ ಶಾಲೆಯ ಮಕ್ಕಳಿಗೆ ಕುಡಿಯವ ನೀರಿಗೆ, ಅಕ್ಷರ ದಾಸೋಹ ಅಡುಗೆಗೆ ಹಾಗೂ ಶಾಲಾ ಕೈತೋಟಕ್ಕೆ ಬಲಕೆಯಾಗುತ್ತಿತ್ತು. ಅಲ್ಲದೆ ಬೇಸಿಗೆಯಲ್ಲಿ ಶಾಲಾ ಪರಿಸರದ ನಿವಾಸಿಗಳು ಕುಡಿಯಲು ಈ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದರು. ಶಾಲೆಗೆ ನೀರು ಬಳಕೆಗಾಗಿ ಬಾವಿಗೆ ವಿದ್ಯುತ್ ಪಂಪ್ ಅಳವಡಿಸಲಾಗಿತ್ತು. ಇದೀಗ ಬಾವಿ ಕುಸಿತದಿಂದಾಗಿ ಸುಮಾರು ರೂ. 2 ಲಕ್ಷ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News