ಕಾಸರಗೋಡು ; ಕೊರೋನ ಭೀತಿ : ಅ. 23ರವರೆಗೆ ನಿಷೇಧಾಜ್ಞೆ

Update: 2020-10-16 15:16 GMT

ಕಾಸರಗೋಡು : ಜಿಲ್ಲೆಯಲ್ಲಿ ಜಾರಿಗೊಳಿಸಿರುವ 144 ನಿಷೇಧಾಜ್ಞೆಯನ್ನು  ಅ.  23   ತನಕ  ವಿಸ್ತರಿಸಿ ಜಿಲ್ಲಾಧಿಕಾರಿ  ಡಿ . ಸಜಿತ್  ಬಾಬು ಆದೇಶ ನೀಡಿದ್ದಾರೆ.

ಕೊರೋನ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಅ. 2 ರಿಂದ 16 ತನಕ ನಿಷೇಧಾಜ್ಞೆ ಯನ್ನು  ಜಾರಿಗೆ ತರಲಾಗಿತ್ತು .   ಇದೀಗ ಸೋಂಕು ನಿಯಂತ್ರಣಕ್ಕೆ  ಬರದ  ಹಿನ್ನಲೆಯಲ್ಲಿ  ನಿಷೇಧಾಜ್ಞೆಯನ್ನು ವಿಸ್ತರಿದ್ದು , ಅ. 23 ರ ಮಧ್ಯರಾತ್ರಿ 12 ಗಂಟೆ  ತನಕ  ಜಾರಿಯಲ್ಲಿರಲಿದೆ.

ಮಂಜೇಶ್ವರ , ಕುಂಬಳೆ , ಬದಿಯಡ್ಕ , ಕಾಸರಗೋಡು , ವಿದ್ಯಾನಗರ , ಮೇಲ್ಪರಂಬ , ಬೇಕಲ , ಹೊಸದುರ್ಗ , ನೀಲೇಶ್ವರ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರಪ್ಪ ಪರಪ್ಪ , ಒಡೆಯಂಚಾಲ್  , ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ  ನಿಷೇಧಾಜ್ಞೆ ವಿಸ್ತರಿಸಲಾಗಿದೆ .

ಈ ಪ್ರದೇಶಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ವಿವಾಹಕ್ಕೆ 50 ಮಂದಿ , ಮರಣಾ ನಂತರದ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಅವಕಾಶ  ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News