ಕಲಾ ಸಿಲ್ಕ್ ವಸ್ತ್ರೋತ್ಸವ ಆರಂಭ : ಹ್ಯಾಂಡ್ ಲೂಮ್, ಹ್ಯಾಂಡಿಕ್ರಾಫ್ಟ್ ಪ್ರದರ್ಶನ-ಮಾರಾಟ

Update: 2020-10-16 16:19 GMT

ಮಂಗಳೂರು, ಅ.16: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ವಸ್ತುಗಳು ಇದೀಗ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಸ್ತೆಯ ವುಡ್‌ಲ್ಯಾಂಡ್ ಹೋಟೆಲ್ ಆವರಣದಲ್ಲಿ ಲಭ್ಯ ಇವೆ. ಕಲಾಸಿಲ್ಕ್ ವಸ್ತ್ರೋತ್ಸವ 2020 ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದೆ.

ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್‌ಗಳು ತೆರೆದಿವೆ. ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ ಕೌಂಟರ್‌ಗಳು. ಅಸ್ಸಾಂನ ಮೂಗಾ ಎರಿ ಸಿಲ್ಕ್ಸ್, ಬಿಹಾರ್‌ನ ಬಾಗಲ್ಪುರ ಸಿಲ್ಕ್ ಟಸ್ಸರ್, ಛತ್ತೀಸ್‌ಗಡ್‌ದ ಟ್ರಿಬಲ್ ವರ್ಕ್ಸ್ ಕೋಸಾ ಸಿಲ್ಕ್ಸ್, ಗುಜರಾತ್‌ನ ಬಾಂದನಿ, ಕಚ್ಚ ಎಂಬ್ರೈಡರಿ ಡ್ರೆಸ್ಸ್, ಸಾರೀಸ್, ಜಮ್ಮು ಕಾಶ್ಮೀರದ ಎಂಬ್ರೈಡರಿ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್ ಪಾಸ್ಮಿನ ಶಾಲ್, ಕರ್ನಾಟಕದ ಕ್ರೇಪ್ ಪ್ರಿಂಟೆಡ್ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು ಮಾರಾಟಕ್ಕೆ ಲಭ್ಯ ಇವೆ.

ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ, ರಾಜಸ್ಥಾನದ ಕೋಟಾ, ಬಾಂದೇಜ್, ಬ್ಲಾಕ್ ಪ್ರಿಂಟ್ಸ್, ಸಂಗ್ನರಿ ಪ್ರಿಂಟ್ಸ್ ಡ್ರೆಸ್ ಮೆಟಿರಿಯಲ್ಸ್, ತೆಲಂಗಾಣದ ಗದ್ವಾಲ, ನಾರಾಯಣಪೇಟೆ ಪೋಚಂಪಳ್ಳಿ, ಉತ್ತರಪ್ರದೇಶದ ಜಮ್ದಾನಿ ಬನಾರಸ್ ಲಕ್ನೋವಿ ಡ್ರೆಸ್ ಮೆಟಿರಿಯಲ್ಸ್, ಪಶ್ಚಿಮ ಬಂಗಾಳದ ಬಾಲುಚರಿ, ತಂಗಾಯಿ, ಕಾಂತ ಕೌಂಟರ್‌ಗಳು ತೆರೆಯಲಿವೆ. ಎಲ್ಲ ಬಟ್ಟೆ-ದಿರುಸುಗಳ ರಿಯಾಯಿತಿ ದರದಲ್ಲಿ ಲಭ್ಯ ಇವೆ.

ಹರಿಯಾಣ ಬೆಡ್ ಕವರ್‌ಗಳು ಕುಶನ್ ಕವರ್ಸ್‌, ಲಕ್ನೋ ವಿ ಕುರ್ತಿಸ್, ಡ್ರೆಸ್ ಮೆಟೀರಿಯಲ್ಸ್, ಡೋರ್ ಕರ್ಟನ್ಸ್, ಜೈಪುರಿ ಸ್ಟೋನ್ ಜುವೆಲರಿ, ಪರ್ಲ್ಸ್, ವುಡನ್ ಹ್ಯಾಂಡಿಕ್ರಾಫ್ಟ್, ಬಂಜಾರ ಕೊಲ್ಕತ್ತ ಬ್ಯಾಗ್ಸ್, ಜೈಪುರಿ ರಾಜ್ಹಿ, ಒರಿಸ್ಸಾ ಪೈಟಿಂಗ್ ಹ್ಯಾಂಡಿಕ್ರಾಫ್ಟ್ ಐಟಮ್‌ಗಳು ಕೂಡ ಇಲ್ಲಿ ಲಭ್ಯವಿದೆ. ಅಲ್ಲದೆ, ಮಕ್ಕಳಿಗಾಗಿ ಪ್ರತ್ಯೇಕ ಕೌಂಟರ್‌ಗಳಿವೆ. ಮಕ್ಕಳಿಗಾಗಿ ಶೇ.100 ಕಾಟನ್ ಬಟ್ಟೆಗಳು ಕೇವಲ ರೂ.19, 29, 39, 49, 59, 69, 99 ಮಾತ್ರ. 

ಪ್ರದರ್ಶನವು ಮಂಗಳೂರಿನಲ್ಲಿ ಅ.16ರಿಂದ 30ರವರೆಗೆ ನಡೆಯಲಿದೆ. ಮಂಗಳೂರಿನ ಜನತೆಯು ಇದರ ಸದುಪಯೋಗ ಪಡೆದುಕೊಳ್ಳಲು ಕಂಪೆನಿಯ ವಕ್ತಾರ ಸಂಜಯ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಸರಾ: ಶೇ.65 ದರ ಕಡಿತ

ಲಾಕ್‌ಡೌನ್ ನಂತರ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಲಾಸಿಲ್ಕ್ ವಸ್ತ್ರೋತ್ಸವ 2020 ಆಯೋಜಿಸಲಾಗಿದೆ. ಉತ್ಸವದಲ್ಲಿ ಹ್ಯಾಂಡ್‌ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಗ್ರಾಹಕರು ಖರೀದಿಸುವ ಬಟ್ಟೆಗಳಿಗೆ ಮದುವೆ ಹಾಗೂ ದಸರಾ ಹಬ್ಬದ ಪ್ರಯುಕ್ತ ಶೇ.65 ರಷ್ಟು ದರ ಕಡಿತ ಸೌಲಭ್ಯ ಇದೆ. ಬೆಳಗ್ಗೆ 10:30ರಿಂದ ರಾತ್ರಿ 9ರವರೆಗೆ ಪ್ರದರ್ಶನ, ಮಾರಾಟ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News