ಚೊಕ್ಕಬೆಟ್ಟು: ಸಾಧಕರಿಗೆ ಸನ್ಮಾನ

Update: 2020-10-16 16:30 GMT

ಮಂಗಳೂರು, ಅ.16: ಚೊಕ್ಕಬೆಟ್ಟುವಿನ ತರ್ಬಿಯತುಲ್ ಮಸಾಕೀನ್ ಅಸೋಸಿಯೇಶನ್‌ನ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ಜರುಗಿತು.

ಮಾಲಿಕ್ ದಿನಾರ್ ಇಸ್ಲಾಮಿಕ್ ಅಕಾಡಮಿಯಲ್ಲಿ ‘ಮಾಲಿಕಿ’ ಹಾಗೂ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯಲ್ಲಿ ‘ಹುದವಿ’ ಬಿರುದು ಪಡೆದ ಅಬ್ದುಸ್ಸಮದ್ ಹುದವಿ ಮತ್ತು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಗೊಂಡ ಅಫ್ರೀನಾ ಹಾಗೂ ಚೊಕ್ಕಬೆಟ್ಟು ಜಾಮಿಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಫಿಯ್ಲತ್ ಸಬಾಹ್ ಹಾಗೂ ದ್ವಿತೀಯ ಸ್ಥಾನ ಪಡೆದ ಮಝ್ವಿನಾ ಮತ್ತು ಆಯಿಶಾ ಶಿಫಾನಾ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶೈಮಾ ಮತ್ತು ಹಾಝರಾ ಸಹಲಾ, ದ್ವಿತೀಯ ಸ್ಥಾನ ಪಡೆದ ನಾಫಿಯಾ ಆಯಿಶತುಲ್ ಕುಬ್ರಾ ಅವರನ್ನು ಸನ್ಮಾನಿಸಲಾಯಿತು.

ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಲ್‌ಹಾಜ್ ಯುಕೆ ಅಬ್ದುಲ್ ಅಝೀಜ್ ದಾರಿಮಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಚೊಕ್ಕಬೆಟ್ಟು ಮಸೀದಿಯ ಅಧ್ಯಕ್ಷ ಅಮೀರ್ ಹುಸೈನ್, ಯುನೈಟೆಡ್ ಜಿಸಿಸಿ ಚೊಕ್ಕಬೆಟ್ಟು ಜಮಾಅತ್ ಅಧ್ಯಕ್ಷ ಮುಹಮ್ಮದ್ ಸಾದಿಕ್, ಆಸಿಫ್ ಇಸ್ಮಾಯೀಲ್, ಅಬ್ದುಲ್ ಖಾದರ್ ಕುಳಾಯಿ, ಹಾಜಿ ಅಬ್ದುಲ್ ರಹೀಂ ಎನ್‌ಎಂಪಿಟಿ ಭಾಗವಹಿಸಿದ್ದರು. ಮುಹಮ್ಮದ್ ಕಮಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News