ಈ ದೇಶದಲ್ಲಿ ಕೊರೋನ ನಿರ್ಬಂಧ ಕಠಿಣ: ಒಂದು ಮನೆಯವರು ಇನ್ನೊಂದು ಮನೆಗೆ ಭೇಟಿ ನೀಡುವುದು ನಿಷೇಧ

Update: 2020-10-16 16:36 GMT
ಸಾಂದರ್ಭಿಕ ಚಿತ್ರ

ಲಂಡನ್, ಅ. 16: ಪ್ರಧಾನಿ ಬೊರಿಸ್ ಜಾನ್ಸನ್ ನೇತೃತ್ವದ ಬ್ರಿಟನ್ ಸರಕಾರ ದೇಶದಲ್ಲಿನ ಕೊರೋನ ವೈರಸ್ ನಿರ್ಬಂಧಗಳನ್ನು ಕಠಿಣಗೊಳಿಸಿದೆ. ರಾಜಧಾನಿ ಲಂಡನ್‌ನಲ್ಲಿ ಒಂದು ಮನೆಯವರು ಮತ್ತೊಂದು ಮನೆಯವರನ್ನು ಭೇಟಿಯಾಗುವುದನ್ನು ಶುಕ್ರವಾರ ಮಧ್ಯರಾತ್ರಿಯಿಂದ ನಿಷೇಧಿಸಲಾಗಿದೆ.

ಸಾಂಕ್ರಾಮಿಕವು ಹರಡುತ್ತಿರುವ ವೇಗವನ್ನು ಕುಗ್ಗಿಸಲು ಲಂಡನ್ ಮತ್ತು ಇತರ ನಗರಗಳಲ್ಲಿ ಸ್ಥಳೀಯ ಅವಶ್ಯಕತೆಗಳಿಗೆ ತಕ್ಕಂತೆ ನಿರ್ಬಂಧಗಳನ್ನು ವಿಧಿಸಬೇಕಾದ ಅಗತ್ಯವಿದೆ ಎಂದು ಗುರುವಾರ ಸಂಸತ್ತಿನಲ್ಲಿ ಮಾತನಾಡಿದ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದರು.

ಶುಕ್ರವಾರ ಮಧ್ಯರಾತ್ರಿಯ ಬಳಿಕ, ಲಂಡನ್‌ನಲ್ಲಿ ಒಂದು ಮನೆಯವರು ಇನ್ನೊಂದು ಮನೆಯವರನ್ನು ಅವರ ಮನೆಗಳಲ್ಲಾಗಲಿ, ಒಳಾಂಗಣ ಸ್ಥಳಗಳಲ್ಲಾಗಲಿ ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News