ತ್ಯಾಜ್ಯ ಹಲಸಿನ ಹಣ್ಣಿನಿಂದ ಪರ್ಯಾಯ ಇಂಧನ ಯೋಜನಾ ವರದಿಗೆ ರಾಷ್ಟ್ರೀಯ ಮನ್ನಣೆ

Update: 2020-10-16 17:03 GMT

ಪುತ್ತೂರು : ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಬ್ಬರು ಮಂಡಿಸಿದ 'ತ್ಯಾಜ್ಯ ಹಲಸಿನ ಹಣ್ಣಿನಿಂದ ಪರ್ಯಾಯ ಇಂಧನ' ಯೋಜನಾ ವರದಿಗೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದೆ.

ಇಲ್ಲಿನ ವಿದ್ಯಾರ್ಥಿಗಳಾದ ಪ್ರಖ್ಯಾತ್ ವೈ.ಬಿ ಮತ್ತು ಪ್ರಣವ್ ವೈ ಬಿ (ಯತೀಶ್ವಂದ್ರ ಮತ್ತು ಹರೀಣಾಕ್ಷಿ ದಂಪತಿಯ ಪುತ್ರರು) ವರದಿ ಮಂಡಿಸಿದ ಸಹೋದರರು.

ಇಂಧನ ಉತ್ಪಾಧನಾ ಕ್ಷೇತ್ರದಲ್ಲಿರುವ ಅಂತಾರಾಷ್ಟ್ರೀಯ ಶೆಲ್ ಕಂಪೆನಿಯು ಕಳೆದ ವರ್ಷ ಬೆಂಗಳೂರಿನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನನ್‍ ನೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶ 'ಎನ್‍ಎಕ್ಸ್ ಪ್ಲೋರರ್ 19-20' ಇದರಲ್ಲಿ ಪ್ರಖ್ಯಾತ್ ಮತ್ತು ಪ್ರವೀಣ್ ಭಾಗವಹಿಸಿ 'ಬಯೋಫಿಯೆಲ್ ಆ್ಯಂಡ್ ಜಗ್ಗರಿ ಫ್ರಾಂ ವೇಸ್ಟ್ ಜಾಕ್‍ಫುಟ್' ಎಂಬ ಯೋಜನಾ ವರದಿ ಮಂಡಿಸಿದ್ದರು. ವರದಿಗೆ ಬಹುಮಾನ ಪಡೆದಿರುವು ದಲ್ಲದೆ ಅಂತಾಷ್ಟ್ರೀಯ ಸಮಾವೇಕ್ಕೆ ಆಯ್ಕೆಗೆ ಅರ್ಹತೆ ಪಡೆದಿದ್ದರು. ಅದರ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ಪ್ರಪಂಚದ 20 ದೇಶ ಗಳಿಂದ ಆಯ್ಕೆಯಾದ ಒಟ್ಟು 6 ಪ್ರಾಜೆಕ್ಟ್ ಗಳಲ್ಲಿ ವಿಖ್ಯಾತ್ ಮತ್ತು ಪ್ರಣವ್ ಅವರ ಪ್ರಾಜೆಕ್ಟ್ ಭಾರತದಿಂದ ಆಯ್ಕೆಯಾದ ಏಕೈಕ ಯೋಜನಾ ವರದಿಯಾಗಿದೆ.

ಎಲ್‍ಎಲ್‍ಎಫ್‍ನ ಮ್ಯಾನೇಜರ್ ಹಾನ ಮುರುಗನ್ ಅವರ ಮಾರ್ಗದರ್ಶನದಲ್ಲಿ, ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ, ಪ್ರಖ್ಯಾತ್ ಮತ್ತು ಪ್ರಣವ್‍ರ ಸಹಪಾಠಿಗಳಾದ ರೋಹನ್, ನಿಶಾನ್ ಮತ್ತು ನಿಶಿತ್ ಪ್ರಾಜೆಕ್ಟ್ ತಯಾರಿಕೆಯಲ್ಲಿ ಸಹಕರಿಸಿದ್ದಾರೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುಖ್ಯಗುರು ರೂಪಕಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News