ಮೀರಾ ಕುಮಾರ್ ಫೇಸ್‌ಬುಕ್ ಪೇಜ್ ಬ್ಲಾಕ್: ಪ್ರತಿಭಟನೆಯ ಬಳಿಕ ತೆರವು

Update: 2020-10-16 17:13 GMT

  ಹೊಸದಿಲ್ಲಿ,ಅ.12: ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಫೇಸ್ ಬುಕ್ ಪುಟವನ್ನು ಸ್ತಂಭನಗೊಳಿಸಲಾಗಿರುವ ಬಗ್ಗೆ ತಾನು ತನಿಖೆ ನಡೆಸುವುದಾಗಿ ಸಾಮಾಜಿಕ ಜಾಲತಾಣ ಸಂಸ್ಥೆಯು ತಿಳಿಸಿದೆ.

 ಮೀರಾ ಕುಮಾರ್ ಅವರ ಅಧಿಕೃತ ಫೇಸ್‌ಬುಕ್‌ ಪುಟವನ್ನು ಗುರುವಾರ ಸ್ತಂಭನಗೊಳಿಸಲಾಗಿತ್ತು. ಆದರೆ ಕೆಲವೇ ತಾಸುಗಳ ಬಳಿಕ ಅದನ್ನು ಅನ್‌ ಬ್ಲಾಕ್ ಮಾಡಲಾಯಿತು.

ಈ ಬಗ್ಗೆ ಶುಕ್ರವಾರ ಫೇಸ್‌ಬುಕ್‌ನ ವಕ್ತಾರರು ಹೇಳಿಕೆಯೊಂದನ್ನು ನೀಡಿ, ಮೀರಾಕುಮಾರ್ ಅವರ ಅಧಿಕೃತ ಫೇಸ್‌ಬುಕ್ ಪುಟವನ್ನು ಮರುಸ್ಥಾಪಿಸಲಾಗಿತ್ತು. ಉಂಟಾಗಿರುವ ಅಸೌಕರ್ಯಕ್ಕಾಗಿ ವಿಷಾದಿಸುತ್ತೇವೆ ಹಾಗೂ ವಿಷಯದ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ’’ ಎಂದು ತಿಳಿಸಿದ್ದಾರೆ.

  ತನ್ನ ಫೇಸ್‌ಬುಕ್ ಪುಟವನ್ನು ಸ್ತಂಭನಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲೆ ಆಗಿರುವ ಆಘಾತ ಎಂದು ಮೀರಾ ಕುಮಾರ್ ಗುರುವಾರ ಟ್ವೀಟ್ ಮಾಡಿದ್ದರು. ಆದರೆ ಕೆಲವು ತಾಸುಗಳ ಬಳಿಕ ಆಕೆ ಮರು ಟ್ವೀಟ್ ಮಾಡಿ, ಭಾರೀ ಪ್ರತಿಭಟನೆಯ ಬಳಿಕ ಫೇಸ್‌ಬುಕ್ ಪುಟವನ್ನು ಅನ್‌ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದರು.

ಕಳೆದ ತಿಂಗಳುಗಳಿಂದ ಭಾರತದ ಪೇಸ್‌ಬುಕ್ ಸಂಸ್ಥೆಯ ನಿರ್ಧಾರಗಳು ಅದರ ಕೆಲವು ಅಧಿಕಾರಿಗಳ ರಾಜಕೀಯ ಒಲವಿನಿಂದ ಪ್ರೇರಿತವಾಗಿದೆಯೆಂಬ ಆರೋಪಗಳು ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News