ಅ.19ರಿಂದ ಫೈಝೀಸ್ ಅಸೋಸಿಯೇಶನ್‌ನಿಂದ ಮೀಲಾದ್ ಅಭಿಯಾನ

Update: 2020-10-17 12:28 GMT

ವಿಟ್ಲ, ಅ.17: ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ (ಸ.) ಜನ್ಮ ತಿಂಗಳಲ್ಲಿ ‘ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ’ ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಅಭಿಯಾನವು ಅ.19ರಿಂದ ನವೆಂಬರ್ 14ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 27 ಸ್ಥಳಗಳಲ್ಲಿ ಮೀಲಾದ್ ಮೀಟ್ ನಡೆಯಲಿದೆ. ಅಭಿಯಾನಕ್ಕೆ ಅ.19ರಂದು ಕರಾಯ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಗುವುದು. ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅಭಿಯಾನ ಉದ್ಘಾಟಿಸುವರು. ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಅಧ್ಯಕ್ಷ ಉಸ್ಮಾನುಲ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸುವರು.

ರಾಜ್ಯ ದಾರಿಮೀಸ್ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಮುಖ್ಯ ಭಾಷಣ ಮಾಡುವರು. ಸೈಯದ್ ಜುನೈದ್ ಜಿಫ್ರಿ ತಂಙಳ್ ಆತೂರು ಮೌಲಿದ್ ಹಾಗೂ ದುಆಗೆ ನೇತೃತ್ವ ನೀಡುವರು. ಕರಾಯ ಮುದರ್ರಿಸ್ ಹೈದರ್ ದಾರಿಮಿ ಹಾಗೂ ಉಮರಾ ಸಾದಾತ್ ಪ್ರಮುಖರು ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಮಿತ್ತಬೈಲ್, ಮೂಡುಬಿದಿರೆ, ಕಲ್ಲಡ್ಕ, ಸಜಿಪ, ಕನ್ಯಾನ, ಆತೂರು, ಬಪ್ಪಳಿಗೆ, ಮಾಡನ್ನೂರ್, ಕಕ್ಕಿಂಜೆ, ಸುಳ್ಯ. ಕೊಡಗು ಜಿಲ್ಲೆಯ ಎಮ್ಮೆಮಾಡು, ಸಿದ್ದಾಪುರ, ಜ್ಯೋತಿನಗರ, ಕುಶಾಲ ನಗರ, ಶನಿವಾರಸಂತೆ, ವಿರಾಜಪೇಟೆ, ಒಳಮಾಳಂ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಿಳಗೊಳ, ಉಡುಪಿ ಜಿಲ್ಲೆಯ ರೆಂಜಾಳ, ಹಾಸನ ಜಿಲ್ಲೆಯ ಜಾವಗಲ್, ಆನೆಮಹಲ್. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಬೆಂಗಳೂರಿನಲ್ಲೂ ವಿವಿಧ ದಿನಗಳಲ್ಲಿ ಮೀಲಾದ್ ಮೀಟ್ ನಡೆಯಲಿದೆ.

ನ.14ರಂದು ಮಿತ್ತಬೈಲಿನಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ. ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯ, ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ರಾಜ್ಯಾಧ್ಯಕ್ಷ ಉಸ್ಮಾನುಲ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದು, ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಮೌಲಿದ್ ಪಾರಾಯಣ ಹಾಗೂ ದುಆಗೆ ನೇತೃತ್ವ ವಹಿಸಲಿರುವರು.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎಂ.ಅಬ್ದುಲ್ಲಾ ಫೈಝಿ, ಅಮೀರ್ ತಂಙಳ್, ಮೂಸಲ್ ಫೈಝಿ, ಇಬ್ರಾಹೀಂ ಬಾಖವಿ, ಕನ್ಯಾನ ಸುಲೈಮಾನ್ ಫೈಝಿ, ಎಸ್.ಬಿ. ದಾರಿಮಿ, ಕುಕ್ಕಿಲ ದಾರಿಮಿ, ಅಝೀಝ್ ದಾರಿಮಿ, ಶರೀಫ್ ಫೈಝಿ ಕಡಬ ಇನ್ನಿತರ ಅನೇಕ ಉಲಮಾ, ಉಮರಾ ನೇತಾರರು ಭಾಗವಹಿಸುವರು ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News