×
Ad

ರೇಡಿಯೋ ಸಾರಂಗ್‌ನಿಂದ ‘ಮೂರು ಮಡಕೆ-ಒಂದು ಸಾಧನ’ ಕಾರ್ಯಕ್ರಮ

Update: 2020-10-17 18:17 IST

ಮಂಗಳೂರು, ಅ.17: ಜಗತ್ತನ್ನು ನಮ್ಮ ಮನೆ ಮಾಡಬೇಕೇ ವಿನಃ ನಮ್ಮ ಮನೆಯನ್ನು ಜಗತ್ತು ಮಾಡುವುದಲ್ಲ ಎಂದು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಜೆ. ಪಿಂಟೊ ಹೇಳಿದ್ದಾರೆ.

ರೇಡಿಯೋ ಸಾರಂಗ್ ಮತ್ತು ರಾಮಕೃಷ್ಣ ಮಿಷನ್ ನಗರದಲ್ಲಿ ಆಯೋಜಿಸಿದ ‘ಮೂರು ಮಡಕೆ-ಒಂದು ಸಾಧನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಎಲ್ಲರೂ ತಮ್ಮ ಮನೆಯ ತ್ಯಾಜ್ಯಕ್ಕೆ ತಾವೇ ಹೊಣೆಗಾರರಾದರೆ ಪರಿಸರ ಸ್ವಚ್ಛವಾಗಿರುತ್ತದೆ. ಸ್ವಚ್ಛ ಪರಿಸರದಿಂದ ಮನಸ್ಸು ಮತ್ತು ಹೃದಯಗಳನ್ನು ಸ್ವಚ್ಛವಾಗಿಡುವುದು ಸಾಧ್ಯವಾಗುತ್ತದೆ ಎಂದು ಫಾ. ಪಿಂಟೊ ನುಡಿದರು.

ನಾಲ್ವತ್ತು ಆಸಕ್ತ ಕೇಳುಗರಿಗೆ ಅಡುಗೆ ಮನೆಯ ತ್ಯಾಜ್ಯವನ್ನು ನಿರ್ವಹಿಸಿ ಗೊಬ್ಬರವನ್ನು ಮಾಡಬಹುದಾದ ಮೂರು ಮಡಕೆಗಳನ್ನು ವಿತರಿಸ ಲಾಯಿತು. ರಾಮಕೃಷ್ಣ ಮಿಷನ್‌ನ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪಾಡಿ, ದ.ಕ. ಸ್ವಚ್ಛ ಭಾರತ ಮಿಷನ್‌ನ ಉಪಕಾರ್ಯದರ್ಶಿ ಮತ್ತು ನೋಡಲ್ ಅಧಿಕಾರಿ ಆನಂದ್ ಕುಮಾರ್ ಕೆ., ಕಾಲೇಜಿನ ಪ್ರಾಂಶುಪಾಲ ಡಾ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ,, ರೇಡಿಯೋ ಸಾರಂಗ್ ನಿರ್ದೇಶಕ ಡಾ.ಫಾ.ಮೆಲ್ವಿನ್ ಪಿಂಟೊ ಎಸ್.ಜೆ. ಉಪಸ್ಥಿತರಿದ್ದರು.

ಸಚಿನ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಆರ್‌ಜೆ. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News