​ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ

Update: 2020-10-17 12:50 GMT

ಉಡುಪಿ, ಅ.17: ಪಶ್ಚಿಮ ಕರಾವಳಿಯ ಮಂಗಳೂರಿನಿಂದ ಕಾರವಾರದ ವರೆಗಿನ ಅರಬಿಸಮುದ್ರದಲ್ಲಿ ಮುಂದಿನ 24 ಗಂಟೆಗಳ ಕಾಲ 2.2ಮೀ.ನಿಂದ 3.2ಮೀ. ಎತ್ತರದ ಅಲೆಗಳು ಏಳುವ ಹಿನ್ನೆಲೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸಂದರ್ಭದಲ್ಲಿ ಅಲೆಗಳ ವೇಗವು ಸೆಕೆಂಡ್‌ಗೆ 40ರಿಂದ 80ಸೆ.ಮೀ. ಆಗಿರುತ್ತದೆ. ಈ ಮುನ್ನೆಚ್ಚರಿಕೆ ಅ.18ರ ಮಧ್ಯರಾತ್ರಿ ಯವರೆಗೂ ಲಾಗೂ ಆಗಿರುತ್ತದೆ ಎಂದೂ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News