ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ : 33ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮೊಬೈಲ್‍ ಕೋರ್ಸು ಪ್ರಮಾಣಪತ್ರ ವಿತರಣೆ

Update: 2020-10-17 16:40 GMT

ಮಂಗಳೂರು :  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಡೆಸಲ್ಪಡುವ ಮೊಬೈಲ್ ಟೆಕ್ನಿಶಿಯನ್ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 33 ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಆಝಾದ್ ಹಾರ್ಡ್‍ವೇರ್ ಇದರ ಆಡಳಿತ ನಿರ್ದೇಶಕರಾದ ರಹ್ಮತ್ತುಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್‍ ರಿಪೇರಿ ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಟ್ಯಾಲೆಂಟ್‍ ಸಂಸ್ಥೆಯು ಸಮಾಜದಲ್ಲಿರುವ ನಿರ್ಗತಿಕರ ಕಣ್ಣೀರನ್ನು ಒರೆಸುವ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡುಬರುತ್ತಿದೆ. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಅಬ್ದುಲ್‍ ರವೂಫ್ ಪುತ್ತಿಗೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಬ್ರೈಟ್‍ ಗ್ರಾನೇಟ್ ಆ್ಯಂಡ್ ಮಾರ್ಬಲ್ ಮಾಲಕರು ಅಕ್ಬರ್ ಸಿದ್ದೀಕ್, ಶಿರೀನ್ ಎಂಟರ್ ಪ್ರೈಸಸ್ ಮಾಲಕರಾದ ಮುನೀರ್ ಎಮ್.ಕೆ, ಪೈಪ್‍ ಇಂಡಿಯಾ ಟ್ರೇಡಸ್ಸ್ ಮಂಗಳೂರು ಇದರ ಮಾಲಕರಾದ ಮುಹಮ್ಮದ್ ಸಲಿಮ್ ಕುದ್ರೋಳಿ, ಟಿ.ಆರ್.ಎಫ್ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಟ್ಯಾಲೆಂಟ್‍ನ ಅಧ್ಯಕ್ಷ ರಿಯಾಝ್‍ ಕಣ್ಣೂರು ಪ್ರಸ್ತಾವನೆಗೈದರು. ಮೊಬೈಲ್‍ ಕೋರ್ಸು ವಿದ್ಯಾರ್ಥಿ ಯಾಸಿನ್‍ ಖಿರಾಅತ್ ಪಠಿಸಿದರು. ಡಿ ಅಬ್ದುಲ್ ಹಮೀದ್‍ ಕಣ್ಣೂರು ಸರ್ಟಿಫಿಕೇಟ್‍ ವಿತರಣಾ ಕಾರ್ಯಕ್ರಮ ನಡೆಸಿದರು.

ಮೊಬೈಲ್ ಟೆಕ್ನಿಶಿಯನ್ ಶಿಕ್ಷಕ ಅಬ್ದುಲ್ ಮಜೀದ್‍ ತುಂಬೆ ವಂದಿಸಿದರು. ನಕಾಶ್ ಬಾಂಬಿಲ ಕಾರ್ಯಕ್ರಮ ನಿರೂಪಿಸಿದರು. ಮೊಬೈಲ್‍ ಕೋರ್ಸು ಪೂರ್ತಿಗೊಳಿಸಿದ  ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಮೊಬೈಲ್‍ ರಿಪೇರಿ ಕಿಟ್ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News