ಒಳಚರಂಡಿ ಸಂಪರ್ಕ: ಸಹಕರಿಸಲು ಮನಪಾ ಮನವಿ

Update: 2020-10-17 16:51 GMT

ಮಂಗಳೂರು, ಅ.17: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೂತನ ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಲು ಅಮೃತ್ ಯೋಜನೆಯಡಿ ಮಂಗಳೂರು ನಗರದ ಒಳಚರಂಡಿ ಕಾಮಗಾರಿಯನ್ನು ಕೊಲ್ಕತ್ತ ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸಲು ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.

ಒಳಚರಂಡಿ ಜಾಲ ವ್ಯವಸ್ಥೆಯ ವಲಯ 1, 4, 7 ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವ ಮತ್ತು ನಗರದ ಒಳಚರಂಡಿ ಜಾಲದ ವ್ಯವಸ್ಥೆಯನ್ನು ವಲಯ 7 ಲೆಟರಲ್ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಕಾಮಗಾರಿಯನ್ನು ಕೊಲ್ಕತ್ತಾ ಮೂಲದ ಎಂ.ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿ. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

ಹಾಲಿ ಇರುವ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿ ನೂತನವಾಗಿ ಅಳವಡಿಸುವ ಒಳಚರಂಡಿ ಜಾಲಕ್ಕೆ ಸಂಪರ್ಕ ನೀಡುವ ಅಗತ್ಯವಿದೆ. ಸಂಸ್ಥೆಯ ಪ್ರತಿನಿಧಿಗಳು ಅಥವಾ ಸಿಬ್ಬಂದಿ ತಮ್ಮ ಇಲಾಖೆಯ ಗುರುತಿನ ಚೀಟಿ ಹೊಂದಿದ್ದಲ್ಲಿ ಮನೆಯ ಮಾಲಕರು, ವಾಸವಿರುವವರು ಒಳ ಚರಂಡಿ ಸಂಪರ್ಕ ನೀಡಲು ಸಹಕರಿಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News