ನೀಟ್ : ಆಳ್ವಾಸ್ ಉತ್ತಮ ಸಾಧನೆ

Update: 2020-10-17 16:56 GMT

ಮೂಡುಬಿದಿರೆ : ಈ ಬಾರಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು 650 ಅಂಕಗಳಿಗಿಂತ ಅಧಿಕ, 37 ಮಂದಿ 600 ಅಂಕಗಳಿಗಿಂತ ಅಧಿಕ, 500ರಿಂದ 600 ಅಂಕಗಳ ಒಳಗಡೆ, 139 ಮಂದಿ, 400ರಿಂದ 500 ಅಂಕಗಳ ಒಳಗಡೆ 203 ವಿದ್ಯಾರ್ಥಿಗಳು, 300-400 ಅಂಕಗಳ ಒಳಗಡೆ 535 ವಿದ್ಯಾರ್ಥಿಗಳು ಅಂಕ ಗಳಿಸಿದ್ದು, ಒಟ್ಟು 914 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

720 ಅಂಕಗಳಲ್ಲಿ ಅರ್ನವ್ ಅಯ್ಯಪ್ಪ(685) ಅನಘ್ರ್ಯ ಕೆ(683)ಪಿ.ಎಸ್.ರವೀಂದ್ರ (670) ಖುಷಿ ಚೌಗಲೆ(661)ಪೂಜಾ ಜಿ.ಎಸ್ (656)ಚಂದುಸಾಬ್ ದಿವಾನ್‍ಸಾಬ್ ಪೈಲ್ವಾನ್ (651) ಚಿನ್ಮಯಿ ಆರ್.( 650) ವರುಣ್ ತೇಜ್ ವೈ.ಡಿ( 650) ಅಂಕ ಗಳಿಸಿದ್ದಾರೆ.

ಅನಘ ತೆನಗಿ( 647), ಅಂತರ್ಯಾ ಎನ್(646), ಕಲ್ಪನಾ(642), ದೆವಿನ್ ಪ್ರಜ್ವಲ್ ರೈ(641), ಅಭಿಷೇಕ್ ಸಂಗಪ್ಪ(640), ಅವಿನಾಶ್ (637), ಯಶ್ವಿನಿ(636), ಅಮೃತೇಶ್(636), ತೇಜಸ್(634), ದರ್ಶನ್(632), ಗಣೇಶ್(632), ದೀಪಕ್ ಬಾಬು(626), ಪ್ರಮೋದ್(625), ಸಂಜನಾ ಡೇಸಾ(623), ಹರಿಣಿ(621), sಶಶಾಂಕ್(615), ಅಮೋಘ (614), ಹೇಮಂತ್(612), ಲಕ್ಷ್ಮೀ(612), ಸಾಯಿ ತೇಜ್(610), ಗಾಯತ್ರಿ(610), ಪ್ರೀತಿ(606), ಷಣ್ಮುಖ ಗೌಡ(606), ವೈಷ್ಣವಿ(606), ಶಿರಿಶಾ ರೆಡ್ಡಿ(604), ಹರ್ಷಿತಾ(604), ಮನೋಜ್ ಸಜ್ಜನ್(604), ನಿಸರ್ಗ(600), ವರುಣ್ ಅರ್ಜುನ್ (600) ಅಂಕ ಗಳಿಸಿದ್ದಾರೆ.

ಆಳ್ವಾಸ್ ಒಂದೇ ಕಾಲೇಜಿನಿಂದ 350ಕ್ಕೂ ಅಧಿಕ ಮಂದಿ ಸರ್ಕಾರಿ ವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯುತ್ತಿರುವುದೂ ವಿಶೇಷ.ಅಖಿಲ ಭಾರತ ಮಟ್ಟದಲ್ಲಿ ಪ.ವರ್ಗದ ವಿಭಾಗದಲ್ಲಿ ವಾಲ್ಮೀಕಿ ತೇಜಸ್ವಿನಿ 92 ಹಾಗೂ ಉಮೇಶ್ ಸಣ್ಣ ಹನುಮಪ್ಪ 119 ಹಾಗೂ ವಿಕಲ ಚೇತನರ ವಿಭಾಗದಲ್ಲಿ ಸುಶೀಲ 477ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಡಾ. ಆಳ್ವ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ವಿಭಾಗವಾರು ಡೀನ್ ಮತ್ತು ನೀಟ್ ತರಬೇತಿ ಬಳಗದವರು, ಆಳ್ವಾಸ್ ಪಿ.ಆರ್.ಒ. ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News