ತನಿಷ್ಕ್ ಜಾಹೀರಾತು ಬಗ್ಗೆ ದ್ವೇಷ ಹರಡಿದವರ ವಿರುದ್ಧ ಅಮಿತ್ ಶಾ ಗರಂ

Update: 2020-10-18 05:54 GMT

ಹೊಸದಿಲ್ಲಿ: ತನಿಷ್ಕ್ ಜ್ಯುವೆಲ್ಲರಿ ಬ್ರಾಂಡ್ ಬಿಡುಗಡೆ ಮಾಡಿದ ವಿವಾದಾತ್ಮಕ ಜಾಹೀರಾತಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದ್ವೇಷ ಹರಡಿದವರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಂತರ್ ಧರ್ಮೀಯ ಕುಟುಂಬವೊಂದು ಹಿಂದೂ ಮಹಿಳೆಯ ಸೀಮಂತದ ಸಂಭ್ರಮವನ್ನು ಆಚರಿಸುವ ಜಾಹೀರಾತು ವಿವಾದಕ್ಕೆ ಕಾರಣವಾಗಿತ್ತು.

"ನಮ್ಮ ಸಾಮಾಜಿಕ ಸಾಮರಸ್ಯದ ಬೇರುಗಳು ಗಟ್ಟಿಯಾಗಿವೆ" ಎಂದು ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಶಾ ಹೇಳಿದ್ದಾರೆ. "ಅದರ ಮೇಲೆ ಇಂಥ ಹಲವು ದಾಳಿಗಳಾಗಿವೆ. ಬ್ರಿಟಿಷರು ಈ ಸಾಮರಸ್ಯ ಮುರಿಯಲು ಪ್ರಯತ್ನಿಸಿದರು. ಬಳಿಕ ಕಾಂಗ್ರೆಸ್ ಕೂಡಾ ಇದನ್ನೇ ಪ್ರಯತ್ನಿಸಿತು" ಎಂದು ಹೇಳಿದ್ದಾರೆ.

ಹಲವು ಹಿಂದುತ್ವ ಸಂಘಟನೆಗಳ ಬೆಂಬಲಿಗರು ಮತ್ತು ಜಾಲತಾಣಿಗರ ಕಟು ಟೀಕೆ ಬಳಿಕ ಮಂಗಳವಾರ ಈ ಜಾಹೀರಾತನ್ನು ತನಿಷ್ಕ್ ವಾಪಾಸು ಪಡೆದಿತ್ತು. ಹಿಂದೂ ಸೊಸೆಯ ಸೀಮಂತ ಸಮಾರಂಭವನ್ನು ಅಂತರ್ ‌ಧರ್ಮೀಯ ಕುಟುಂಬ ಆಯೋಜಿಸಿದ ದೃಶ್ಯಾವಳಿಯನ್ನು ಹಬ್ಬದ ಹಿನ್ನೆಲೆಯಲ್ಲಿ ತನಿಷ್ಕ್ ಬಿಡುಗಡೆ ಮಾಡಿತ್ತು.

"ಇಂಥ ಸಣ್ಣ ಘಟನೆಗಳು" ಭಾರತದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಲಾರವು ಎಂದು ಶಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News