ಉಪ್ಪಿನಂಗಡಿ : ಸುನ್ನಿ ಯುವ ಜನ ಸಂಘದಿಂದ ಕಿಟ್ ವಿತರಣೆ

Update: 2020-10-18 07:15 GMT

ಉಪ್ಪಿನಂಗಡಿ : ಲಾಕ್ ಡೌನ್ ನಿಮಿತ್ತ ಸಂಕಷ್ಟ ಅನುಭವಿಸುತ್ತಿರುವ ಧಾರ್ಮಿಕ ಕ್ಷೇತ್ರದ ಉಸ್ತಾದರಿಗೆ ಮಂಗಳೂರು ಮೂಲದ ದಾನಿಯೊಬ್ಬರು ನೀಡಿದ ದಿನಸಿ ಸಾಮಗ್ರಿಗಳ ಕಿಟ್ ವಿತರಣೆಯನ್ನು ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ ವೈ ಎಸ್ ಕೇಂದ್ರ ಸಮಿತಿ ಸದಸ್ಯ ಎಸ್ ಬಿ ದಾರಿಮಿ ಮಾತನಾಡಿ ಸ್ವಾಭಿಮಾನವನ್ನು ಯಾವತ್ತೂ ಬಿಟ್ಟುಕೊಡದ ಧಾರ್ಮಿಕ ಕಾರ್ಯಕರ್ತರಲ್ಲಿ ಹಲವರು ಲಾಕ್ ಡೌನ್ ನಿಮಿತ್ತ ಇಂದು ಸಂಕಷ್ಟ ಅನುಭವಿಸುತ್ತಿದ್ದು ಇವರ ನೋವಿಗೆ ಸ್ಪಂದಿಸಲು ಸಮಾಜವು ಮುಂದೆ ಬರಬೇಕಾಗಿದೆ. ಇವರನ್ನು ಧಾರ್ಮಿಕ ಕ್ಷೇತ್ರದಲ್ಲಿ ಉಳಿಸಿ ಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇವರು ಬೇರೆ ಕ್ಷೇತ್ರಕ್ಕೆ ವಲಸೆ ಹೋದರೆ ಮಕ್ಕಳಿಗೆ ಜ್ಞಾನ ಪ್ರಸರಿಸಲು ಜನ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಿಸ ಬೇಕಾಗುತ್ತದೆ ಎಂದರು.

ಎಸ್ ವೈ ಎಸ್ ವಲಯಾದ್ಯಕ್ಷ ಯೂನಿಕ್ ರಹ್ಮಾನ್ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ ಎಲ್ ದಾರಿಮಿ ಮುಖ್ಯ ಭಾಷಣ ಮಾಡಿದರು.

ಮಜ್ಲಿಸುನ್ನೂರು ವಲಯ ಅಮೀರ್ ಸಿದ್ದೀಖ್ ಪೈಝಿ ಕರಾಯ ಮಾತನಾಡಿದರು. ಉದ್ಯಮಿ ಶುಕೂರು ಹಾಜಿ ಉಪಸ್ಥಿತರಿದ್ದರು.
ಇ ಕೆ ಅಬ್ದರ್ರಹ್ಮಾನ್ ಮುಸ್ಲಿಯಾರ್ ಕರಾಯ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News