ದಾರುನ್ನೂರ್ : ಆಲಾ ಹಝ್ರತ್ ಉರೂಸ್ ಕಾರ್ಯಕ್ರಮ

Update: 2020-10-18 08:11 GMT

ವಿಟ್ಲ : ಎಸ್.ಕೆ.ಎಸ್.ಎಸ್.ಎಫ್ ಇಬಾದ್ ಕರ್ನಾಟಕ ವತಿಯಿಂದ ಆಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ ಉರೂಸ್ ಕಾರ್ಯಕ್ರಮ ಹಾಗೂ ಅಧ್ಯಯನ ಶಿಬಿರವನ್ನು ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣದಲ್ಲಿ ಆಯೋಜಿಸಲಾಯಿತು.

ಸೂಫೀ ಶ್ರೇಣಿಯ ವಿದ್ವಾಂಸರ ಸಾಲಿನಲ್ಲಿ ಪ್ರಮುಖ ಅಹ್ಲುಸ್ಸುನ್ನತ್ ವಲ್ ಜಮಾಅತಿನ ಪ್ರಚಾರಕರಾದ ಆಲಾ ಹಝ್ರತ್ ಉರೂಸ್ ಭಾರತ ಹಾಗೂ ನೆರೆಯ ದೇಶಗಳಲ್ಲಿ ಆಚರಿಸಲಾಗುತ್ತಿದೆ.

ಮುಫ್ತಿ ರಫೀಕ್ ಅಹ್ಮದ್ ಹುದವಿ ಅಲ್ ಖಾದಿರಿ ಕೋಲಾರ ಅನುಸ್ಮರಣಾ ಭಾಷಣವನ್ನು ನಡೆಸಿ ಆಲಾ ಹಝ್ರತ್ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ವಿವಿರಿಸಿದರು.

ಮುಂಬೈಯ ಫಖರೆ ಆಲಂ ನೂರಿ ಮತ್ತು ಬಳಗದವರು  ನಅತೇ ಷರೀಫ್ ಆಲಾಪನೆ ನಡೆಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮರ್ಹೂಂ ನಝೀರ್ ಅಝ್ಹರಿಯವರ ಪುತ್ರ ಸುಹೈಲ್ ಸಾಹಿಬ್, ಮುಫ್ತಿ ಮುಹಮ್ಮದ್ ಬಾಖವಿ ಅಲ್ ಖಾದಿರಿ, ಸಂಸ್ಥೆಯ ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷ ಫಕೀರಬ್ಬ ಮಾಸ್ಟರ್, ಉಪಪ್ರಾಂಶುಪಾಲ ತ್ವಾಹಾ ಹುದವಿ, ಶಬೀರ್ ಫೈಝಿ, ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ಮೊದಲಾದವರು ಉಪಸ್ಥಿತರಿದ್ದರು. ಇಬಾದ್ ಕನ್ವೀನರ್ ಮೌಲಾನಾ ಅಬ್ದುಲ್ ರಹಿಮಾನ್ ದಾಯಿ ಸ್ವಾಗತಿಸಿ, ಅಬ್ದುಲ್ ರಶೀದ್ ಹುದವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News