ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ ರಕ್ತದಾನ ಶಿಬಿರ

Update: 2020-10-18 08:19 GMT

ದುಬೈ : ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಸಹಭಾಗಿತ್ವದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಬೃಹತ್ ರಕ್ತ ದಾನ ಶಿಬಿರವು ದುಬೈ ಲತೀಫ ಆಸ್ಪತ್ರೆ ಕೇಂದ್ರದಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲೀ ತಂಙಲ್  ಮಾತನಾಡಿ ರಕ್ತ ದಾನ ಮಹಾ ದಾನ ವಾಗಿರುತ್ತದೆ. ಕೋವಿಡ್ ಕಾಲದಲ್ಲಿ ಇದಕ್ಕಾಗಿ ಉತ್ಸಾಹ ತೋರಿಸಿದ ರಕ್ತ ದಾನಿಗಳನ್ನು ಅಭಿನಂದಿಸಿ, ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಕಾರ್ಯದರ್ಶಿ ಹುಸೈನ್ ಫೈಝಿ ಕೊಡಗು ಅವರು ದುವಾ ನೆರವೇರಿಸಿದರು.

ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿಸಿ ರೋಡ್ ಸ್ವಾಗತಿಸಿದರು. ರಕ್ತ ದಾನ ಶಿಬಿರದಲ್ಲಿ  ನೂರ ನಲವತ್ತಕ್ಕೂ ಹೆಚ್ಚು ರಕ್ತ ದಾನಿಗಳು ದುಬೈ ಮತ್ತು ಶಾರ್ಜಾ ಎಮಿರೇಟ್ಸ್ ಗಳಿಂದ ಆಗಮಿಸಿ ರಕ್ತ ದಾನ  ಮಾಡಿ ಜೀವ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಿದರು. ರಕ್ತ ದಾನಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ, ದಾರುನ್ನೂರ್ ಯುಎಇ ಸಮಿತಿ, ನೂರುಲ್ ಹುದಾ ಯುಎಇ ಸಮಿತಿ, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಯುಎಇ ಸಮಿತಿ, ದಾರುಸ್ಸಲಾಮ್ ಯುಎಇ ಸಮಿತಿಯ ನಾಯಕರು ಪದಾಧಿಕಾರಿಗಳು ಸಹಕರಿಸಿದ್ದರು.

ವಿಖಾಯ ಯುಎಇ ಸಮಿತಿಯ ಕೊ ಚಯರ್ ಮೇನ್  ಸಫಾ ಇಸ್ಮಾಯಿಲ್ ಬಜ್ಪೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News