​ಮಂಗಳೂರು: 'ಲಲಿತಾ ಜ್ಯುವೆಲ್ಲರಿ' ನೂತನ ಮಳಿಗೆ ಶುಭಾರಂಭ

Update: 2020-10-18 13:13 GMT

ಮಂಗಳೂರು, ಅ.18: ದಕ್ಷಿಣ ಭಾರತದ ಸ್ವರ್ಣೋದ್ಯಮದಲ್ಲಿ ಮುಂಚೂಣಿಯಲ್ಲಿರುವ ‘ಲಲಿತಾ ಜ್ಯುವೆಲ್ಲರಿ’ಯ ನೂತನ ಮಳಿಗೆಯು ನಗರದ ಪಿವಿಎಸ್ ವೃತ್ತ ಬಳಿಯ ಕುಶೆ ಸದನದಲ್ಲಿ ರವಿವಾರ ಶುಭಾರಂಭಗೊಂಡಿತು.

ಶಾಸಕ ವೇದವ್ಯಾಸ ಕಾಮತ್ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದಲ್ಲಿ ಅತ್ಯಧಿಕ ಚಿನ್ನ, ಬೆಳ್ಳಿ, ವಜ್ರಾಭರಣಗಳು ಮಂಗಳೂರಿನಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಡೆದ ಸಮೀಕ್ಷೆಯ ಆಧಾರದ ಮೇಲೆ ನಗರದಲ್ಲಿ ಚಿನ್ನಾಭರಣಗಳ ಬೃಹತ್ ಶೋರೂಂಗಳು ತಲೆ ಎತ್ತುತ್ತಿವೆ. ಆದ್ದರಿಂದ ಸ್ವರ್ಣೋದ್ಯಮದಲ್ಲಿ ಬಹಳ ಪೈಪೋಟಿಯೂ ಶುರುವಾಗಿದೆ. ಇದೀಗ ‘ಲಲಿತಾ ಜ್ಯುವೆಲ್ಲರಿ’ ಮಳಿಗೆಯು ನಗರದಲ್ಲಿ ಆರಂಭಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಮಳಿಗೆಯಲ್ಲಿ 150ಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಮೇಯರ್ ದಿವಾಕರ್ ಪಾಂಡೇಶ್ವರ ಅವರು ವಜ್ರ, ಪ್ಲಾಟಿನಂ,ಆ್ಯಂಟಿಕ್ ಹಾಗೂ ಬೆಳ್ಳಿಯ ಅಭರಣ ಮತ್ತು ವಸ್ತುಗಳ ವಿಭಾಗವನ್ನು ಉದ್ಘಾಟಿಸಿದರು.

ಶಾಸಕರಾದ ಯು.ಟಿ. ಖಾದರ್, ಡಾ. ವೈ.ಭರತ್ ಶೆಟ್ಟಿ, ಕಾರ್ಪೋರೇಟರ್‌ಗಳಾದ ಪೂರ್ಣಿಮಾ, ಶಕಿಲಾ ಕಾವಾ, ಸಂದೀಪ್ ಗರೋಡಿ, ಕಿರಣ್ ಕುಮಾರ್, ರೂಪಶ್ರೀ, ಬ್ರಾಂಚ್ ಮ್ಯಾನೇಜರ್ ಅನಿಲ್ ಕುಮಾರ್, ಸಹಾಯಕ ಬ್ರಾಂಚ್ ಮ್ಯಾನೇಜರ್‌ಗಳಾದ ಶಶಿಧರ ಎಂ., ಸೆಂಥಿಲ್, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News