ಮುದ್ರಾಡಿ: ಅಖಿಲ ಭಾರತ ರಂಗೋತ್ಸವ ಉದ್ಘಾಟನೆ

Update: 2020-10-18 14:09 GMT

ಹೆಬ್ರಿ, ಅ.18: ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾಸಂಘಟನೆ ವತಿಯಿಂದ ಮುದ್ರಾಡಿಯ ಬಿ.ವಿ.ಕಾರಂತ ಬಯಲು ರಂಗಮಂದಿರ ದಲ್ಲಿ 9 ದಿನಗಳ ಕಾಲ ನಡೆಯುವ ನಾಟ್ಕ ಮುದ್ರಾಡಿ 20ನೇ ನವರಂಗೋತ್ಸವ - ಅಖಲಿ ಭಾರತ ರಂಗೋತ್ಸವವನ್ನು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ಕುಮಾರ್ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಲಾ ಪೋಷಕ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಕರ್ಣಾಟ ನಾಡಪೋಷಕ ಪ್ರಶಸ್ತಿ ಮತ್ತು ರಂಗ ನಟ ನಿರ್ದೇಶಕ ಬ್ರಹ್ಮಾವರದ ರವಿ ಎಸ್.ಪೂಜಾರಿ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಮ ತುಳುವೆರ್ ಕಲಾ ಸಂಘಟನೆಯ ಸಂಚಾಲಕ ಧರ್ಮದರ್ಶಿ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಕಲಾ ಬದ್ದತೆ, ತಪಸ್ಸು ಮತ್ತು ಶ್ರಮದಿಂದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ವಿಶ್ವಮಾನ್ಯ ವಾಗಿದೆ. ಇಡೀ ಕುಟುಂಬವನ್ನೇ ಕಲೆಗೆ ಸಮರ್ಪಣೆ ಮಾಡಿಕೊಂಡು ಕಲೆ ಮತ್ತು ನಾಡಿಗೆ ಅಪಾರ ಕೊಡುಗೆ ನೀಡಿದೆ. ಅತ್ಯಂತ ಗ್ರಾಮೀಣ ಪ್ರದೇಶವನ್ನು ಕಲೆಯ ಆರಾಧನಾ ಕೇಂದ್ರವಾಗಿ ಮಾಡಿ ವಿಶ್ವದೆತ್ತರಕ್ಕೆ ಏರಿದೆ ಎಂದು ಹೇಳಿದರು.

ರಂಗ ನಟಿ, ನಿರ್ದೇಶಕಿ ಪೂರ್ಣಿಮಾ ಸುರೇಶ್ ನಾಯಕ್, ಉದ್ಯಮಿ ವಿಜಯ ಶೆಟ್ಟಿ ಕಾರ್ಕಳ, ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಕಮಲಾ ಮೋಹನ್, ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನ ಶಿಕ್ಷಕರಿಂದ ಯಕ್ಷಪಾಠ ಯಕ್ಷಗಾನ ತಾಳಮದ್ದಳೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News