ದ.ಕ. ಜಿಲ್ಲೆ : ಕೋವಿಡ್‌ಗೆ ಮೂವರು ಬಲಿ, 183 ಮಂದಿಗೆ ಕೊರೋನ ಸೋಂಕು

Update: 2020-10-18 15:12 GMT

ಮಂಗಳೂರು, ಅ.18: ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನದಿಂದಾಗಿ ಮೃತಪಟ್ಟವರ ಸಂಖ್ಯೆ 631ಕ್ಕೆ ಏರಿಕೆಯಾಗಿದೆ. ರವಿವಾರ ಹೊಸದಾಗಿ 183 ಮಂದಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28,314ಕ್ಕೆ ಏರಿಕೆ ಕಂಡಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಸರಕಾರಿ ಅಂಕಿ-ಅಂಶದ ಪ್ರಕಾರ ಮಂಗಳೂರು ತಾಲೂಕು ಅಗ್ರಸ್ಥಾನದಲ್ಲಿದೆ.

ಸೋಂಕು ಇಳಿಕೆ ಪ್ರಮಾಣದಂತೆಯೇ ಗುಣಮುಖರಾಗುತ್ತಿರುವವರು ಕಡಿಮೆಯಾಗುತ್ತಿದ್ದಾರೆ. ಮೊದಲು ಗುಣಮುಖರಾಗುತ್ತಿರುವವ ಸಂಖ್ಯೆ 500ರ ಆಸುಪಾಸಿನಲ್ಲಿದ್ದರೆ, ಸದ್ಯ 200ರ ಗಡಿಗೆ ಬಂದು ತಲುಪಿದೆ. ರವಿವಾರ 272 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆ ಗಳು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 24,288 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 3,395 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ 2,24,879 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷಿಸಲಾಗಿದೆ. ಈ ಪೈಕಿ 1,96,565 ವರದಿಗಳು ನೆಗೆಟಿವ್ ಆಗಿದ್ದರೆ, ಇನ್ನುಳಿದವು ಪಾಸಿಟಿವ್ ಆಗಿವೆ.

8,330 ಕೇಸು: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 8,330 ಕೇಸು ಪತ್ತೆಯಾಗಿವೆ. ಅಂಥವರಿಂದ ಇಲ್ಲಿಯವರೆಗೆ 9,66,075 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News