×
Ad

ಸುಳ್ಯದ ವಸತಿಗೃಹದಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ

Update: 2020-10-19 19:28 IST
ದರ್ಶನ್/ ಇಂದಿರಾ

ಸುಳ್ಯ: ಸುಳ್ಯ ನಗರದ ವಸತಿಗೃಹವೊಂದರಲ್ಲಿ ಯುವಕ ಮತ್ತು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡ ಯುವಕ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್(19) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ(19) ಎಂದು ಗುರುತಿಸಲಾಗಿದೆ.

ಅ. 18 ರಂದು ರಾತ್ರಿ ಸುಳ್ಯದ ವಸತಿಗೃಹವೊಂದಕ್ಕೆ ಬಂದು ಸಂಬಂಧಿಕರು ಎಂದು ಹೇಳಿ ಊರಿಗೆ ಹೋಗಲು ಬಸ್ಸು ಇಲ್ಲ ಎಂದು ಹೇಳಿ ಯುವತಿಯ ದಾಖಲೆ ನೀಡಿ ರೂಮ್ ಬುಕ್ ಮಾಡಿಕೊಂಡಿದ್ದ. ಅ. 19 ರಂದು ಮಧ್ಯಾಹ್ನ ವೇಳೆಗೆ ವಸತಿಗೃಹದ ಮ್ಯಾನೆಜರ್ ರೂಮ್ ಬಳಿ ಹೋಗಿ ಕಿಟಕಿ ಬಳಿ ಬಂದು ಇಣುಕಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬಯಲಾಗಿದ್ದು ಒಂದೇ ನೇಣಿಗೆ ಇಬ್ಬರು ಕೊರಳೊಡ್ಡಿದ್ದಾರೆ ಎನ್ನಲಾಗಿದೆ.

ಯುವಕ ದರ್ಶನ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಕೋರೋನ ಬರುವ ಮೊದಲು ಇದೇ ವಸತಿಗೃಹದಲ್ಲಿರುವ ಹೋಟೆಲ್‍ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದ. ಕಳೆದ 4 ದಿನದ ಹಿಂದೆ ಮನೆಯಿಂದ ಸ್ನೇಹಿತರ ಜೊತೆಗೆ ಪ್ರವಾಸ ಹೋಗುತ್ತೇನೆ ಎಂದು ಹೊರಟು ಬಂದಿದ್ದನು. ನಿನ್ನೆಯ ದಿನ ತಾಯಿ ಇಂದುಮತಿಯವರು ದರ್ಶನ್‍ಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೇ ಯುವಕನ ತಾಯಿ ಯುವತಿಗೆ ಕರೆ ಮಾಡಿ ಮಗನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಯುವತಿ ಸ್ನೇಹಿತರ ಜೊತೆಗೆ ಹೋಗಿದ್ದಾನೆ ಎಂದು ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News