ದ.ಕ. ಜಿಲ್ಲೆಯಲ್ಲಿ ಸೋಮವಾರ 107 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ 6 ಮಂದಿ ಬಲಿ

Update: 2020-10-19 15:06 GMT

ಮಂಗಳೂರು, ಅ.19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಇಳಿಮುಖದತ್ತ ಸಾಗಿದ್ದು, ಸೋಮವಾರ ಕೇವಲ 107 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಆರು ಮಂದಿ ಸಾವಿಗೀಡಾಗಿದ್ದರೆ, 398 ಮಂದಿ ಗುಣಮುಖರಾಗಿದ್ದಾರೆ.

28,421 ಒಟ್ಟು ಸೋಂಕಿತರ ಪೈಕಿ ಇದುವರೆಗೆ 24,686 ಮಂದಿ ಗುಣಮುಖರಾಗಿದ್ದು,  3,098 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದ್ದು, ಹೊಸದಾಗಿ 6 ಮಂದಿ ಮೃತಪಡುವುದರೊಂದಿಗೆ ಒಟ್ಟು ಸಂಖ್ಯೆ 637ಕ್ಕೆ ಏರಿದೆ.

ಮಾಸ್ಕ್ ಉಲ್ಲಂಘನೆಯ ವಿರುದ್ಧ ಜಿಲ್ಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ 8,495 ಪ್ರಕರಣಗಳನ್ನು ಪತ್ತೆಹಚ್ಚಿ ಒಟ್ಟು 9,82,055 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News