ಬಡಗಬೆಟ್ಟು ಸೊಸೈಟಿಯಿಂದ ಮಿಷನ್ ಆಸ್ಪತ್ರೆಗೆ ವೆಂಟಿಲೇಟರ್ ಕೊಡುಗೆ

Update: 2020-10-19 15:41 GMT

ಉಡುಪಿ, ಅ.19: ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಪ್ರಾಯೋಜಕತ್ವದಲ್ಲಿ ಉಡುಪಿಯ ಲಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಗೆ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ಕೊಡಮಾಡಿದ ಐಸಿಯು ವೆಂಟಿಲೇಟರ್‌ನ್ನು ಸೋಮವಾರ ಸ್ತಾಂತರಿಸಲಾಯಿತು.

ಪಿಎಂ ಕೇರ್ ಫಂಡ್‌ನಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ಮಿಷನ್ ಆಸ್ಪತ್ರೆಗೆ ವೆಂಟಿಲೇಟರ್ ನೀಡಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಈ ವೇಳೆ ಹಸ್ತಾಂತರಿಸಿದರು.

ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಬಡಗಬೆಟ್ಟು ಸೊಸೈಟಿ ಹಾಗೂ ಮಿಷನ್ ಆಸ್ಪತ್ರೆ ಅನ್ಯೋನ್ಯ ಸಂಬಂಧ ಹೊಂದಿದ್ದು, ಕೋವಿಡ್-19 ಚಿಕಿತ್ಸೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬಹಳ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಜನಪರ ಕಾಳಜಿ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ವೆಂಟಿಲೇಟರ್ ನೀಡಲಾಗಿದೆ ಎಂದರು.

ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ಆಸ್ಪತ್ರೆ ಯಲ್ಲಿ ನುರಿತ ವೈದ್ಯರು, ಶುಶ್ರೂಷಕಿಯರ ತಂಡವಿದೆ. ಲಂಬಾರ್ಡ್ ಆಸ್ಪತ್ರೆ ಸೂಪರ್ ಸೆಷ್ಪಾಲಿಟಿ ಆಸ್ಪತ್ರೆಯನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಐಸಿಯು ಘಟಕವನ್ನು ಸ್ಥಾಪಿಸಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಎಲ್ಲಾ ಸಲಕರಣಿಗಳಿರುವುದರಿಂದ ಗಂಭೀರ ಪರಿಸ್ಥಿತಿಯಲ್ಲೂ ಚಿಕಿ್ಸೆ ಸಾಧ್ಯವಿದೆ ಎಂದು ತಿಳಿಸಿದರು.

ಬಡಗಬೆಟ್ಟು ಸೊಸೈಟಿ ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ್ ಪಿ.ಶೆಟ್ಟಿ, ಸೊಸೈಟಿ ಉಪಾಧ್ಯಕ್ಷ ಎಲ್.ಉಮಾನಾಥ್ ಕೋಟ್ಯಾನ್, ಬಿಷಪ್ ರೆ.ಫಾ.ಮೋಹನ್ ಮನೋರಾಜ್, ಉಡುಪಿ ಏರಿಯಾ ಕೌನ್ಸಿಲ್‌ನ ಅಧ್ಯಕ್ಷ ಫಾ.ಐವನ್ ಸೋನ್ಸ್, ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಅರುಣ್ ಕುಮಾರ್, ಪ್ರಮುಖರಾದ ಡಾನ್ ಲಿಡೆಲ್, ಚ್ಲಾಪ್ಲಿನ್ ಇವಲಿ್ ಅಮ್ಮನ್ನ ಉಪಸ್ಥಿತರಿದ್ದರು.
ಕಾಲೇಜ್ ಆ್ ನರ್ಸಿಂಗ್‌ನ ಪ್ರಾಂಶುಪಾಲ ಸುಜಾ ಕರ್ಕಡ ವಂದಿಸಿದರು. ಮೈಕ್ರೋ ಬಯೋಲಜಿಸ್ಟ್ ನಾರಾಯಣ ಸರಳಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News