ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ಬಗ್ಗೆ ವೆಬಿನಾರ್

Update: 2020-10-19 15:43 GMT

ಉಡುಪಿ, ಅ.19: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಆನ್‌ಲೈನ್ ವೆಬಿನರ್ನ್ನು ಅ.17ರಂದು ಆಯೋಜಿಸಲಾಗಿತ್ತು.
ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ- ಮೂಲ ತತ್ವ ಹಾಗೂ ಉಪಯೋಗಗಳ ಬಗ್ಗೆ ವಿಜ್ಞಾನಿ ಡಾ.ನಿತಿನ್ ಲೋಬೊ ಸಂಕ್ಷಿಪ್ತವಾಗಿ ವಿವರಿಸಿದರು.

ಕರ್ನಾಟಕ, ಜಮ್ಮು ಕಾಶ್ಮೀರ, ಅಸ್ಸಾಂ ಸೇರಿದಂತೆ ಹಲವಾರು ರಾಜ್ಯದಿಂದ 418 ಆಸಕ್ತರು ನೋಂದಣಿ ಮಾಡಿದ್ದು, ಎಲ್ಲರಿಗೂ ಅನುಕೂಲವಾಗುವಂತೆ ಮುಂದುವರಿದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭೌತಶಾಸ್ತ್ರ ವಿಭಾಗವು ಆನ್‌ಲೈನ್ ನೇರಪ್ರಸಾರ ನಡೆಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News