​ನಮ್ಮ ಇಂದಿನ ಸ್ವಾತಂತ್ರ ಪೂರ್ವಿಕರ ಹೋರಾಟದ ಫಲ: ಪ್ರೊ.ಪಾಟೀಲ್

Update: 2020-10-19 15:50 GMT

ಉಡುಪಿ, 19. ಇಂದು ನಾವು ಅನುಭಸುತ್ತಿರುವ ಸ್ವಾತಂತ್ರನಮ್ಮ ಪೂರ್ವಿಕರ ಹೋರಾಟ, ಸಮರ್ಪಣೆ, ತ್ಯಾಗ ಹಾಗೂ ಬದ್ದತೆಯ ಪರಿಣಾಮ ದೊರೆತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಡೀನ್ ಹಾಗೂ ಕಾನೂನು ಶಾಲೆಯ ನಿರ್ದೇಶಕ ಪ್ರೊ.(ಡಾ.) ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಭಾರತ ಸಂವಿಧಾನದ ದಿನಾಚರಣೆಯ ಅಂಗವಾಗಿ ಇಂದು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿ ಸಹಯೋಗದಲ್ಲಿ ನಡೆದ ಮೂಲಭೂತ ಕರ್ತವ್ಯಗಳ ಮೂಲಭೂತತೆ ಎಂಬ ರಾಷ್ಟ್ರೀಯ ವೆಬಿನಾರ್ (ಆನ್‌ಲೈನ್) ಹಾಗೂ ವ್ಯಂಗಚಿತ್ರ, ಭಿತ್ತಿಚಿತ್ರ ಬರವಣಿಗೆ ಹಾಗೂ ಲಘು ವೀಡಿಯೋಗಳ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ವಿಷಯ ಪರಿಣಿತರಾಗಿ ಅವರು ಮಾತನಾಡುತಿದ್ದರು. ಾ

ಭಾರತ ಸಂವಿಧಾನವು ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ಸರಕಾರದ ವಿವಿಧ ಅಂಗಗಳ ರಚನೆ ಹಾಗೂ ಅವುಗಳ ನಡುವಿನ ಸಂಬಂಧಗಳ ಬಗ್ಗೆ ತಿಳಿಸುವ ದಾಖಲೆಯಾಗಿದ್ದು, ಇದು ಸರಕಾರದ ಅಧಿಕಾರ ಹಾಗೂ ವೈಯಕ್ತಿಕ ಸ್ವಾತಂತ್ರಗಳ ನಡುವಿನ ಸಮತೋಲನೆ ಕಾಪಾಡುವ ದಾಖಲೆಯಾಗಿದೆ ಎಂದು ಡಾ.ಪಾಟೀಲ್ ವಿವರಿಸಿದರು.

ಭಾರತ ಸಂವಿಧಾನದಲ್ಲಿ ಹೇಳಲಾದ ಮೂಲಭೂತ ಕರ್ತವ್ಯಗಳಾದ ಸಂವಿಧಾನಕ್ಕೆ ಅದರ ಮೌಲ್ಯ, ಸಂಸ್ಥೆಗಳು, ರಾಷ್ಟ್ರೀಯ ಧ್ವಜ, ರಾಷ್ಟ್ರಗೀತೆಗಳಿಗೆ ಗೌರವ, ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿ ಡಿಯುವುದು, ಭಾತೃತ್ವ ಪಾಲಿಸುವುದು, ಮಹಿಳೆಯರಿಗೆ ಗೌರವ, ಹಿರಿಯರು ಹಾಗೂ ಮಕ್ಕಳ ಪೋಷಣೆ, ರಾಷ್ಟ್ರೀ ಸಂಪತ್ತಿನ ಹಾಗೂ ಪರಿಸರ ಸಂರಕ್ಷಣೆಯಂತ ಮೂಲಭೂತ ಕರ್ತವ್ಯಗಳಿಗೆ ನಮ್ಮ ಐತಿಹಾಸಿಕ ಸಾಂಪ್ರದಾಯಗಳು, ಆಚರಣೆ ಗಳು ಹಾಗೂ ಭಾದ್ಯತೆಗಳು ಆಧಾರವಾಗಿವೆ ಎಂದರು.

ಈ ಮೂಲಭೂತ ಕರ್ತವ್ಯಗಳನ್ನು ಸ್ವರಣ್ ಸಿಂಗ್ ಸಮಿತಿ ಶಿಫಾರಸ್ಸಿನ ಮೇರೆಗೆ 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಗಿದ್ದು, ಈ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರೀಕನ ಬದ್ದತೆಯಾಗಿರಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.(ಡಾ.) ಪಿ. ಈಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನಾಂಗವು ಸಂವಿಧಾನದ ಬಗ್ಗೆ ಅದರಲ್ಲೂ ಮುಖ್ಯವಾಗಿ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದು ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ.) ನಿರ್ಮಲ ಹರಿಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾನೂನು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಡಿ.ರಂಗಸ್ವಾಮಿ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜಯಮೋಲ್ ಪಿ.ಎಸ್ ವಂದಿಸಿದರು. ಪ್ರೀತಿ ಹರೀಶ್‌ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News