ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್ ನಲ್ಲಿ ರೆಲಿಶ್ ಸ್ವೀಟ್ಸ್ & ಮೋರ್ ಕೌಂಟರ್ ಶುಭಾರಂಭ
Update: 2020-10-19 22:23 IST
ಮಂಗಳೂರು: ನಗರದ ಪ್ರಸಿದ್ಧ ಡ್ರೈ ಫ್ರೂಟ್ಸ್ ವಿತರಕರಾದ ರೀಮ್ಸ್ ಸಂಸ್ಥೆಯ ರೆಲಿಶ್ ಸ್ವೀಟ್ಸ್ & ಮೋರ್ ಕೌಂಟರ್ ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್ ನ ಅತ್ತಾವರ ಶಾಖೆಯಲ್ಲಿ ಶುಭಾರಂಭಗೊಂಡಿದೆ.
ಉದ್ಘಾಟನೆಯನ್ನು ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ರವೂಫ್ ನೆರವೇರಿಸಿದರು. ಈ ಸಂಧರ್ಭದಲ್ಲಿ ರೀಮ್ಸ್ ಸಂಸ್ಥೆಯ ಪಾಲುದಾರರು ಮತ್ತು ಆ್ಯಪಲ್ ಮಾರ್ಟ್ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.
ಬನಾನ ಹಲ್ವ ಸ್ವೀಟ್ಸ್, ಬಸ್ಮ ಸ್ವೀಟ್ಸ್, ಚಂಪಾಕಲಿ ಸ್ವೀಟ್ಸ್, ಗುಲಾಬ್ ಜಾಮೂನ್, ಗೀ ಮೈಸೂರ್ ಪ್ಯಾಕ್, ರೋಸ್ ಪೆಟಲ್ ಲಡ್ಡು, ಪಿಸ್ತ ಟಾರ್ಟ್, ಫಿಸ್ತಿಕ್ಲಿ ಟರ್ಕಿಸ್ ಮುಂತಾದ ಹಲವು ಬಗೆಯ ಅರೆಬಿಕ್ ಬಕ್ಲಾವ ಸ್ವೀಟ್ಸ್ ಗಳು,ಡಿಲಿಸಿಯಸ್ ಇಟಾಲಿಯನ್, ಹಜ್ ಫ್ಲೇವರ್, ಮೆರ್ಡಾಸ್ ಮುಂತಾದ ಚಾಕಲೇಟ್ ಗಳು ಮತ್ತು ಹಲವು ಬಗೆಯ ಪ್ರೀಮಿಯಂ ಬಿಸ್ಕಿಟ್ಸ್‌ಗಳು ಇಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.