ಬ್ಯಾಂಕ್‌ಗೆ 1,100 ಕೋಟಿ ರೂ. ವಂಚನೆ ಆರೋಪ: ಬಿಎಸ್ಪಿ ಶಾಸಕನಿಗೆ ಸೇರಿದ ಕಟ್ಟಡಗಳ ಮೇಲೆ ಸಿಬಿಐ ದಾಳಿ

Update: 2020-10-19 16:58 GMT

ಹೊಸದಿಲ್ಲಿ, ಅ. 19: 1,100 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ಸಂಬಂಧಿಸಿ ಬಿಎಸ್ಪಿ ಶಾಸಕ ವಿನಯ್ ಶಂಕರ್ ತಿವಾರಿಗೆ ಸೇರಿದ ಕಟ್ಟಡಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿದೆ.

ಲಕ್ನೋದ ಎರಡು ಕಡೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಬ್ಯಾಂಕ್ ಆಫ್ ಇಂಡಿಯ ನೇತೃತ್ವದ ಬ್ಯಾಂಕ್ ಒಕ್ಕೂಟ ದೂರು ಸಲ್ಲಿಸಿದ ಬಳಿಕ ಸಿಬಿಐ ಈ ದಾಳಿ ನಡೆಸಿದೆ.

ಬ್ಯಾಂಕ್ ವಂಚನೆಗೆ ಸಂಬಂಧಿಸಿ ನೋಯ್ಡಾ ಹಾಗೂ ಗೋರಖ್‌ಪುರದಲ್ಲಿ ಕೂಡ ದಾಳಿ ನಡೆಸಲಾಗಿದೆ. ಬಿಎಸ್ಪಿ ಶಾಸಕನಿಗೆ ಸೇರಿದ ಗಂಗೋತ್ರಿ ಎಂಟರ್‌ಪ್ರೈಸಸ್ ದಾಳಿ ನಡೆಸಲಾದ ಸ್ಥಳಗಳಲ್ಲಿ ಒಂದು.

 1,100 ಕೋಟಿ ರೂಪಾಯಿ ಸಾಲ ತೆಗೆದು ಬ್ಯಾಂಕ್‌ಗೆ ವಂಚಿಸಿದ ಆರೋಪದಲ್ಲಿ ತಿವಾರಿ ಹಾಗೂ ಗಂಗೋತ್ರಿಯ ಇತರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಬಿಎಸ್ಪಿ ಶಾಸಕ ಬ್ಯಾಂಕ್‌ನಿಂದ ಸಾಲ ಪಡೆದು ಆ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News