ನೀಟ್ ಪರೀಕ್ಷೆ: ಸಮಾನ ಅಂಕದೊಂದಿಗೆ ಉತ್ತಮ ಸಾಧನೆ ಮಾಡಿದ ಅವಳಿ ಸಹೋದರಿಯರು
Update: 2020-10-19 22:32 IST
ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ 2020 ಪರೀಕ್ಷೆಯಲ್ಲಿ ಮೂಡಬಿದ್ರಿ ಎಕ್ಸಲೆಂಟ್ ಕಾಲೇಜಿನಲ್ಲಿ ಕಳಿತಿರುವ ಅವಳಿ ಸಹೋದರಿಯರಾದ ಝಫಿರ ಇಕ್ಬಾಲ್ ಹಾಗು ಝಹಿರ ಇಕ್ಬಾಲ್ 581ಸಮಾನ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದು, ಸರಕಾರಿ ಖೋಟಾದಡಿ ಎಂಬಿಬಿಎಸ್ ಸೀಟ್ ಪಡೆಯಲಿದ್ದಾರೆ.
ಇವರು ಮುಹಮ್ಮದ್ ಇಕ್ಬಾಲ್ ಹೆಜಮಾಡಿ ಹಾಗು ಲತೀಫಾ ದಂಪತಿಗಳ ಪುತ್ರಿಯರಾಗಿದ್ದಾರೆ.