ಕಡಲಕೆರೆಗೆ 20,000 ಮೀನುಮರಿಗಳ ಸೇರ್ಪಡೆ
ಮೂಡುಬಿದಿರೆ, ಅ.19: ಅರಣ್ಯ ಇಲಾಖೆ, ರೋಟರಿ ಕ್ಲಬ್, ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಇವುಗಳ ಸಹಯೋಗದೊಂದಿಗೆ ಕಡಲಕೆರೆಗೆ 20,000 ವಿವಿಧ ಜಾತಿಯ ಮೀನು ಮರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ೋಮವಾರ ಸಮರ್ಪಿಸಿದರು.
ಅರಣ್ಯ ಇಲಾಖೆ, ರೋಟರಿ ಕ್ಲಬ್, ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಮತ್ತು ಮೀನುಗಾರಿಕೆ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಟ್ಲಾ, ಕಾಮನ್ ಕಾರ್ಪ್ (ಗೌರಿ ಮೀನು), ಗ್ರಾಸ್ ಕಾರ್ಕ್ (ಹುಲ್ಲು ಗೆಂಡೆ ಮೀನು)ಗಳನ್ನು ಕೆರೆಗೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಮೂಲಕ ವನವುಹೋತ್ಸವವನ್ನು ಆಚರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ರಾಜ್ಯ ಕ್ರಿಶ್ಚನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲಸ್ ತಾಕೋಡೆ, ಜಿಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಸದಸ್ಯ ಮಂಜುನಾಥ ರೈ, ಪುರಸಭೆ ಸದಸ್ಯರಾದ ಪಿ.ಕೆ.ಥೋಮಸ್, ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಸೌಮ್ಯಾ ಸಂದೀಪ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಸುದೀಪ್, ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್‌ನ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಕೃಷಿ ವಿಜ್ಞಾನಿ ಡಾ.ಎಲ್. ಸಿ. ಸೋನ್ಸ್, ಹಿರಿಯ ವಕೀಲ ಕೆ.ಆರ್.ಪಂಡಿತ್, ಉಪವಲಯಾರಣ್ಯಾಧಿಕಾರಿಗಳಾದ ಮಂಜುನಾಥ ಗಾಣಿಗ, ಅಶ್ವಿತ್ ಗಟ್ಟಿ, ಪ್ರಿಯಾ ಇನ್ಲೇಂಡ್ ಫಿಶರಿಸ್ ಬೋಟ್ ಸ್ಪೋರ್ಟ್ಸ್ ನಿರ್ವಾಹಕ ಡಾ.ಎಂ.ಎಸ್. ನಝೀರ್ ಮತ್ತಿತರರು ಉಪಸ್ಥಿತರಿದ್ದರು.