ಜೈಲಿಗೆ ದಾಳಿ ನಡೆಸಿ1,300 ಕೈದಿಗಳ ಬಿಡುಗಡೆಗೊಳಿಸಿದ ಬಂಡುಕೋರರು

Update: 2020-10-20 16:29 GMT
ಸಾಂದರ್ಭಿಕ ಚಿತ್ರ

ಕಿನ್‌ಶಾಸ (ಡಿಆರ್ ಕಾಂಗೊ), ಅ. 20: ಡೆಮಾಕ್ರಟಿಕ್ ರಿಪಬ್ಲಿಕ್ ಆಪ್ ಕಾಂಗೊ (ಡಿಆರ್ ಕಾಂಗೊ)ದ ಪೂರ್ವದ ನಗರ ಬೆನಿಯಲ್ಲಿರುವ ಸೆರೆಮನೆಯೊಂದರ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಸಶಸ್ತ್ರ ಬಂಡುಕೋರರು, 1,300ಕ್ಕೂ ಅಧಿಕ ಮಂದಿ ಕೈದಿಗಳನ್ನು ಬಂಧಮುಕ್ತಗೊಳಿಸಿದ್ದಾರೆ.

ಕಾಂಗ್‌ಬಾಯಿ ಕೇಂದ್ರೀಯ ಕಾರಾಗೃಹ ಮತ್ತು ಅದರ ಕಾವಲು ಕಾಯುತ್ತಿರುವ ಸೇನಾ ಶಿಬಿರದ ಮೇಲೆ ಬಂಡುಕೋರರು ಏಕಕಾಲದಲ್ಲಿ ದಾಳಿ ನಡೆಸಿದರು ಎಂದು ನಗರದ ಮೇಯರ್ ಮೋಡೆಸ್ಟ್ ಬಕ್ವನಮಹ ತಿಳಿಸಿದರು. ದಾಳಿಯ ಬಳಿಕ, ಜೈಲಿನಲ್ಲಿ ಕೇವಲ ಸುಮಾರು 100 ಕೈದಿಗಳು ಉಳಿದಿದ್ದಾರೆ. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಬಂಡುಕೋರ ಗುಂಪು ಎಡಿಎಫ್ ದಾಳಿಯನ್ನು ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ತಪ್ಪಿಸಿಕೊಂಡಿರುವ ಕೈದಿಗಳ ಪೈಕಿ ಸುಮಾರು 20 ಮಂದಿ ಜೈಲಿಗೆ ವಾಪಸಾಗಿದ್ದಾರೆ ಎಂದು ಅವರು ತಿಳಿಸಿದರು.

ದಾಳಿಯ ವೇಳೆ ಇಬ್ಬರು ಕೈದಿಗಳನ್ನು ಬಂಡುಕೋರರು ಗುಂಡು ಹಾರಿಸಿ ಕೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News