ಖಶೋಗಿ ಗೆಳತಿಯಿಂದ ಅವೆುರಿಕ ನ್ಯಾಯಾಲಯದಲ್ಲಿ ಸೌದಿ ಯುವರಾಜ ವಿರುದ್ಧ ಮೊಕದ್ದಮೆ

Update: 2020-10-21 17:31 GMT
ಮುಹಮ್ಮದ್ ಬಿನ್ ಸಲ್ಮಾನ್

ವಾಶಿಂಗ್ಟನ್, ಅ. 21: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಸ್ನೇಹಿತೆ, ಟರ್ಕಿ ನಿವಾಸಿ ಹಾತಿಸ್ ಸೆಂಗಿಝ್, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಅಮೆರಿಕದ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಿದ್ದಾರೆ.

ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಎರಡು ವರ್ಷಗಳ ಹಿಂದೆ ಖಶೋಗಿಯನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು. ಸೌದಿ ಅರೇಬಿಯದ ಯುವರಾಜ ಕಳುಹಿಸಿದ ಹಂತಕ ಪಡೆಯೊಂದು ಅವರ ಕೊಲೆಗೈದಿದೆ ಎಂದು ಟರ್ಕಿ ಆರೋಪಿಸಿದೆ.

  2018 ಅಕ್ಟೋಬರ್ 2ರಂದು ನಡೆದ ಅಮೆರಿಕ ವಾಸಿ ಸೌದಿ ಪತ್ರಕರ್ತನ ಹತ್ಯೆಗೆ ಸೆಂಗಿಝ್ ಮತ್ತು ಖಶೋಗಿ ತನ್ನ ಸಾವಿನ ಮೊದಲು ಸ್ಥಾಪಿಸಿದ ಮಾನವಹಕ್ಕು ಸಂಘಟನೆ ‘ಡೆಮಾಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ (ಡಾನ್)’ ಅವೆುರಿಕದ ನ್ಯಾಯಾಲಯದಲ್ಲಿ ಪರಿಹಾರ ಕೋರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News