ಯುಎಇ, ಇಸ್ರೇಲ್ ನಡುವೆ ವಾಯು ಸಾರಿಗೆ ಬಾಂಧವ್ಯ ಒಪ್ಪಂದಕ್ಕೆ ಸಹಿ

Update: 2020-10-21 18:16 GMT

ಟೆಲ್‌ಅವೀವ್ (ಇಸ್ರೇಲ್), ಅ. 21: ಯುಎಇ ಮತ್ತು ಇಸ್ರೇಲ್ ದೇಶಗಳ ನಡುವಿನ ದ್ಷಿಪಕ್ಷೀಯ ವಾಯು ಸಾರಿಗೆ ಬಾಂಧವ್ಯವನ್ನು ಬಲಗೊಳಿಸುವ ನಿಟ್ಟಿನಲ್ಲಿ, ಯುಎಇಯ ನಾಗರಿಕ ವಾಯುಯಾನ ಪ್ರಾಧಿಕಾರವು ಇಸ್ರೇಲ್‌ನ ನಾಗರಿಕ ವಾಯುಯಾನ ಪ್ರಾಧಿಕಾರದೊಂದಿಗೆ ವಾಯು ಸಾರಿಗೆ ಸೇವೆಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಯುಎಇಯ ಹಣಕಾಸು ಸಚಿವ ಹಾಗೂ ನಾಗರಿಕ ವಾಯುಯಾನ ಪ್ರಾಧಿಕಾರದ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಅಬ್ದುಲ್ಲಾ ಬಿನ್ ತೌಖ್ ಅಲ್ ಮರ್ರಿ ಮತ್ತು ಇಸ್ರೇಲ್‌ನ ಸಾರಿಗೆ ಸಚಿವ ಇಸ್ರೇಲ್ ಕಟ್ಝ್ ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮವು ಟೆಲ್‌ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆಯಿತು.

 ಈ ಸಭೆಯಲ್ಲಿ ಉಭಯ ತಂಡಗಳು ನಾಗರಿಕ ವಾಯುಯಾನ ಕ್ಷೇತ್ರದಲ್ಲಿನ ಪರಸ್ಪರ ಆಸಕ್ತಿಯ ವಿಷಯಗಳು ಮತ್ತು ಉಭಯ ದೇಶಗಳ ನಡುವಿನ ಸಹಕಾರದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿದವು.

‘‘ತಮ್ಮ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಒಪ್ಪಂದಕ್ಕೆ ಉಭಯ ದೇಶಗಳು ಕಳೆದ ತಿಂಗಳು ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಿದ ಬಳಿಕ, ಈ ದೇಶಗಳ ನಡುವೆ ಧನಾತ್ಮಕ ಮತ್ತು ಪೂರಕ ಸಂಬಂಧಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಒಪ್ಪಂದವು ಮಹತ್ವದ ಹೆಜ್ಜೆಯಾಗಿದೆ’’ ಎಂದು ಅಲ್ ಮರ್ರಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News