ಜನರನ್ನು ಗೌರವಿಸುವ ಅಧ್ಯಕ್ಷ ಬೇಕು: ಕಮಲಾ ಹ್ಯಾರಿಸ್

Update: 2020-10-22 16:25 GMT

ವಾಶಿಂಗ್ಟನ್, ಅ. 22: ಜನರ ಘನತೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅಮೆರಿಕನ್ನರು ತಮ್ಮ ಸ್ಥಾನವನ್ನು ಮರಳಿಪಡೆಯಲು ಸಾಧ್ಯವಾಗುವ ದಾರಿಯಲ್ಲಿ ದೇಶವನ್ನು ಮುನ್ನಡೆಸುವ ಅಧ್ಯಕ್ಷ ಅಮೆರಿಕಕ್ಕೆ ಬೇಕಾಗಿದ್ದಾರೆ ಎಂದು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಬುಧವಾರ ಹೇಳಿದ್ದಾರೆ.

ಆನ್‌ಲೈನ್ ಮೂಲಕ ನಡೆದ ನಿಧಿ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲಾ, ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿಗಾಗಿ ಹಾಗೂ ಅದರಿಂದಾಗಿ ಉದ್ಭವಿಸಿದ ಆರ್ಥಿಕ ಹಿನ್ನಡೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಿಡಿಗಾರಿದರು.

‘‘ನಾವು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಹಾಗೂ ನಾವು ಯಾರು ಎನ್ನುವುದನ್ನು ಗೌರವಿಸುವ ಮತ್ತು ನಮ್ಮ ಸ್ಥಾನವನ್ನು ಮರಳಿಪಡೆಯಲು ಸಾಧ್ಯವಾಗುವಂತೆ ದೇಶವನ್ನು ಮುನ್ನಡೆಸುವ ಅಧ್ಯಕ್ಷ ಮತ್ತು ನಾಯಕತ್ವ ಇಂದು ನಮಗೆ ಬೇಕಾಗಿದೆ’’ ಎಂದು ಕಮಲಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News