ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಶಾಸಕ ಕಾಮತ್ : ಮಾಜಿ ಶಾಸಕ ಲೋಬೋ ಆರೋಪ

Update: 2020-10-22 16:33 GMT

ಮಂಗಳೂರು, ಅ.22: ನಗರದ ಕುಲಶೇಖರದಿಂದ ಕಣ್ಣಗುಡ್ಡೆಯ ಮೂಲಕ ಪಡೀಲುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಶಾಸಕ ವೇದವ್ಯಾಸ ಕಾಮತ್ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.

ಕಳೆದ 40 ವರ್ಷಗಳಿಂದ ಈ ಪ್ರದೇಶದಲ್ಲಿ ಸರಿಯಾದ ರಸ್ತೆ ಸೌಕರ್ಯ ಇರಲಿಲ್ಲ. ಜನರು ಬಹಳಷ್ಟು ತೊಂದರೆಕ್ಕೀಡಾಗಿದ್ದರು. ಈ ಪ್ರದೇಶವು ರೈಲ್ವೇ ವಲಯವಾಗಿದ್ದು, ಅವರ ಅನುಮತಿಯನ್ನು ಪಡೆದುಕೊಂಡು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನದಟ್ಟು ಮಾಡಿಕೊಟ್ಟು ಲೋಕೋಪ ಯೋಗಿ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಅಪೆಂಡಿಕ್ಸ್ -ಇ ನಲ್ಲಿ 5 ಕೋ.ರೂ. ಅನುದಾನ ಸೇರಿಸುವ ಷರತ್ತಿಗೆ ಒಳಪಟ್ಟ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಿದ್ದೇನೆ. ಈ ರಸ್ತೆಯು ಒಂದು ಕಡೆಯಿಂದ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಲಶೇಖರದಿಂದ ಹಿಡಿದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು (ಕಣ್ಣಗುಡ್ಡೆಯ ಮುಖಾಂತರ) ತನಕ ಕೊಂಡಿ ರಸ್ತೆಯಾಗಿರುತ್ತದೆ. ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯವು ಪ್ರಾರಂಭವಾಗಿದ್ದು, ಇಲ್ಲಿನ ನಾಗರಿಕರು ಕೆಲವೊಂದು ಸಮಸ್ಯೆಗಳಿಂದ ತೊಂದರೆಕ್ಕೀಡಾಗಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ತಾನು ಮಂಜೂರಾತಿ ಮಾಡಿಸಿದ ಅನುದಾನ ವಾಪಸ್ ಹೋಗಿದೆ. ಶಾಸಕರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಮಸ್ಯೆಗಳನ್ನು ಅರಿತುಕೊಳ್ಳದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News