ಅ. 23 ರಂದು 'ಅಸ್ಸಾದಾತ್' ಕೃತಿ ಬಿಡುಗಡೆ

Update: 2020-10-22 17:09 GMT

ಬೆಳ್ತಂಗಡಿ : ಸಾದಾತುಗಳ ಪರಿಚಯ ಹೊಂದಿರುವ 'ಅಸ್ಸಾದಾತ್' ಎಂಬ ಕೃತಿ ಯನ್ನು ಬೆಳ್ತಂಗಡಿ ತಾಲೂಕಿನ ಮುರ -ನಾವೂರು ಜಮಾತಿನ ಅನಿವಾಸಿ ಗಲ್ಫ್  ಸಂಘಟನೆ 'ಬದ್ರುಲ್ ಹುದಾ ಗಲ್ಫ್ ಅಸೋಸಿಯೇಶನ್' ಬಿಡುಗಡೆ ಮಾಡುತ್ತಿದೆ.  

ಈ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದ್ದು, ತಾಲೂಕಿನ 10 ಜಮಾತಿನಲ್ಲಿ ಅ. 23 ರಂದು ಜುಮಾ ನಮಾಝ್ ನಂತರ ಸ್ಥಳೀಯ ಸಾದಾತುಗಳು, ಉಲಮಾಗಳು ಹಾಗೂ ಜಮಾತಿನ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಂಘಟನೆಯ ಅಧ್ಯಕ್ಷ ಇಲ್ಯಾಸ್ ಮದನಿ ನಾವೂರು (ತಾಯಿಫ್, ಸೌದಿ ಅರೇಬಿಯಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃತಿ ಬಿಡುಗಡೆ ಗೊಳ್ಳಲಿರುವ ಸ್ಥಳಗಳು: ಮುರ, ಗುರುವಾಯನಕೆರೆ, ಕಾಜೂರು, ಕಿಲ್ಲೂರು,  ಬೆಳ್ತಂಗಡಿ,  ಬೆಳಾಲು, ಕುಪ್ಪೆಟ್ಟಿ, ಮನ್ಶರ್ ಗೇರುಕಟ್ಟೆ,  ಜಮಲಾಬಾದ್, ಅಳಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News