ಇಸ್ರೇಲ್ ಪ್ರಯಾಣ ನಿಷೇಧದ ವಿರುದ್ಧ ಫೆಲೆಸ್ತೀನ್ ನರ್ಸ್‌ಗಳ ಪ್ರತಿಭಟನೆ

Update: 2020-10-22 18:02 GMT

ಗಾಝಾ ನಗರ (ಫೆಲೆಸ್ತೀನ್), ಅ. 22: ಇಸ್ರೇಲ್ ಹೊರಡಿಸಿರುವ ಪ್ರಯಾಣ ನಿಷೇಧ ಆದೇಶದಿಂದಾಗಿ, ತಾವು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಜೆರುಸಲೇಮ್‌ನ ಆಸ್ಪತ್ರೆಯು ತಮ್ಮನ್ನು ಕೆಲಸದಿಂದ ತೆಗೆದಿದೆ ಎಂದು ಆರೋಪಿಸಿ ಇಸ್ರೇಲ್ ಆಕ್ರಮಿತ ಗಾಝಾ ಪಟ್ಟಿಯ ನರ್ಸ್‌ಗಳ ಗುಂಪೊಂದು ಬುಧವಾರ ಗಾಝಾನಗರದ ಸಾರ್ವಜನಿಕ ಚೌಕವೊಂದರಲ್ಲಿ ಪ್ರತಿಭಟನೆ ನಡೆಸಿದೆ.

ಜೆರುಸಲೇಮ್‌ನ ಮಕಾಸಿದ್ ಆಸ್ಪತ್ರೆಯಲ್ಲಿ ತಲಾ ಕನಿಷ್ಠ 20 ವರ್ಷಗಳ ಕಾಲ ಕೆಲಸ ಮಾಡಿರುವ ಏಳು ನರ್ಸ್‌ಗಳು ಲ್ಯಾಬ್ ಕೋಟ್‌ಗಳನ್ನು ಧರಿಸಿ ಧರಣಿ ನಡೆಸಿದರು. ‘‘ನಮ್ಮನ್ನು ಕೆಲಸದಿಂದ ತೆಗೆದುಹಾಕಿರುವುದು ನಮ್ಮ ವೃತ್ತಿ ಮತ್ತು ಕುಟುಂಬಗಳಿಗೆ ನೀಡಲಾದ ಮರಣ ದಂಡನೆಯಾಗಿದೆ’’ ಎಂದು ಬರೆದಿರುವ ಫಲಕಗಳನ್ನು ಅವರು ಹಿಡಿದುಕೊಂಡಿದ್ದರು.

ಹಮಾಸ್ ಆಳ್ವಿಕೆಯ ಗಾಝಾ ಪಟ್ಟಿಯಿಂದ ಫೆಲೆಸ್ತೀನೀಯರು ಕೆಲಸಕ್ಕೂ ಹೊರಗೆ ಹೋಗುವುದನ್ನು ನಿಷೇಧಿಸಿರುವ ಇಸ್ರೇಲ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News