ಬಿಹಾರಿಗಳಿಗೆ ಸುಳ್ಳು ಹೇಳಬೇಡಿ ಮೋದಿಜಿ: ರಾಹುಲ್ ಗಾಂಧಿ

Update: 2020-10-23 09:09 GMT

 ಹೊಸದಿಲ್ಲಿ: ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಧಾನಿ 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು. ಆದರೆ ಈ ತನಕ ಯಾರಿಗೂ ಉದ್ಯೋಗ ಲಭಿಸಿಲ್ಲ. ಸಾರ್ವಜನಿಕ ಸ್ಥಳದಲ್ಲಿ ತಾನು ಸೈನಿಕರಿಗೆ, ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಲೆ ಬಾಗುತ್ತೇನೆ ಎಂದು ಅವರು ಹೇಳುತ್ತಾರೆ. ಅವರು ಮನೆಗೆ ತಲುಪಿದ ಬಳಿಕ ಕೇವಲ ಅಂಬಾನಿ ಹಾಗೂ ಅದಾನಿಗೋಸ್ಕರ ಕೆಲಸ ಮಾಡುತ್ತಾರೆ ಎಂದು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ನವಾಡ ಜಿಲ್ಲೆಯಲ್ಲಿ ಮೈತ್ರಿಕೂಟದ ಪರ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಮೋದಿಜಿ ಬಿಹಾರಿಗಳಿಗೆ ಸುಳ್ಳು ಹೇಳಬೇಡಿ.ನೀವು ಬಿಹಾರಿಗೆ ಭರವಸೆ ನೀಡಿದ ಪ್ರಕಾರ ಉದ್ಯೋಗವನ್ನು ನೀಡಿದ್ದೀರಾ? ನೀವು 2 ಕೋಟಿ ಉದ್ಯೋಗದ ಭರವಸೆ ನೀಡಿದ್ದೀರಿ. ಆದರೆ ಯಾರಿಗೂ ಉದ್ಯೋಗ ಲಭಿಸಿಲ್ಲ. ಕೇಂದ್ರ ಸರಕಾರ ಮೂರು ಹೊಸ ಕೃಷಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರ ಮೇಲೆ ದಾಳಿ ನಡೆಸಲಾಗಿದೆ. ಮೊದಲಿಗೆ ಬಿಹಾರದಲ್ಲಿ ಮಂಡಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ಅಂತ್ಯಗೊಳಿಸಲಾಗಿದೆ. ಇದೀಗ ಇಡೀ ದೇಶದಲ್ಲಿ ಇದನ್ನೇ ಮಾಡಲು ಹೊರಟಿದ್ದಾರೆ. ಪ್ರಧಾನಿ ಲಕ್ಷಾಂತರ ನಿರುದ್ಯೋಗ ್ಕೆಕಾರಣವಾಗಿದ್ದು, ಅವರು ಎಲ್ಲಿಗೇ ಹೋಗಲಿ ಅಲ್ಲಿ ಸುಳ್ಳು ಹೇಳುತ್ತಾರೆ ಎಂದು ರಾಹುಲ್ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News