ಮರಳು ದಿಬ್ಬ ತೆರವಿಗೆ ಪರವಾನಿಗೆ : ದ.ಕ. ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ನಿರ್ಣಯ

Update: 2020-10-23 16:00 GMT

ಮಂಗಳೂರು, ಅ.23: ಜಿಲ್ಲೆಯ ಏಳು ಸದಸ್ಯರ ಸಮಿತಿ ಸಭೆಯು ಪ್ರಸ್ತುತ ಮರಳು ದಿಬ್ಬಗಳನ್ನು ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಿಗೆ ನೀಡಲು ನಿರ್ಣಯಿಸಿದೆ.

ಮರಳು ದಿಬ್ಬ ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆಗಾಗಿ 318 ಅರ್ಜಿಗಳು ಸ್ವೀಕೃತಗೊಂಡಿದ್ದವು. 105 ಅರ್ಜಿಗಳನ್ನು ಮೊದಲ ಹಂತ ದಲ್ಲಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದೆ. ಪೂರಕ ದಾಖಲೆ ಇರುವ 89 ಅರ್ಜಿದಾರರಿಗೆ ಮರಳು ದಿಬ್ಬಗಳನ್ನು ತೆರವುಗೊಳಿಸಲು ಷರತ್ತು ಬದ್ಧ ತಾತ್ಕಾಲಿಕ ಪರವಾನಿಗೆ ನೀಡಲು ತೀರ್ಮಾನಿಸಿದೆ.

ಮರಳು ದಿಬ್ಬಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಮರಳು ತೆರವುಗೊಳಿಸುವುದನ್ನು ನಿಯಂತ್ರಿಸಲು ಮರಳು ದೋಣಿಗಳಿಗೆ ಹಾಗೂ ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಿದೆ. ಮರಳು ದಿಬ್ಬಗಳು, ಮರಳು ಧಕ್ಕೆಗಳು ಮರಳು ಸಾಗಾಟ ವಾಹನಗಳ ಕಟ್ಟುನಿಟ್ಟು ನಿರ್ವಹಣೆಗೆ ಮತ್ತು ನಿಯಂತ್ರಕ್ಕೆ ಜಿಲ್ಲಾ ಸಮಿತಿ, ತಾಲೂಕು ಮರಳು ಸಮಿತಿ ಹಾಗೂ ಜಿಲ್ಲಾ ಏಳು ಸದಸ್ಯರ ಸಮಿತಿ ಕ್ರಮ ವಹಿಸಲು ತೀರ್ಮಾನಿಸಿದೆ.

ಮರಳು ದೋಣಿಗಳು ಮತ್ತು ಮರಳು ಸಾಗಾಟ ವಾಹನಗಳ ಜಿಪಿಎಸ್ ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಸೆ.23ರ ಸಭೆಯ ನಿರ್ಣಯ ದಂತೆ ಮೊದಲ ಬಾರಿಗೆ 25,000 ರೂ. ದಂಡ, ಎರಡನೇ ಬಾರಿಗೆ 50,000 ರೂ. ದಂಡ, ಮೂರನೇ ಬಾರಿಗೆ ತಾತ್ಕಾಲಿಕ ಪರವಾನಿಗೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮರಳು ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News