×
Ad

​ಸುರತ್ಕಲ್ ವಲಯ ಎಸ್ ವೈಎಸ್ ವತಿಯಿಂದ ರಬೀಅ್ ಕ್ಯಾಂಪ್, ಕಿಟ್ ವಿತರಣೆ

Update: 2020-10-23 21:51 IST

ಮಂಗಳೂರು, ಅ.23: ಪ್ರವಾದಿ ಮುಹಮ್ಮದ್ (ಸ) ರವರ ಜನ್ಮ ತಿಂಗಳ ಪ್ರಯುಕ್ತ ಎಸ್ ವೈ ಎಸ್ ಕೇಂದ್ರೀಯ ಸಮಿತಿಯ ಸೂಚನೆಯಂತೆ ವಿವಿಧ ಶಾಖಾ ಮಟ್ಟದಲ್ಲಿ ಆಚರಿಸಲಾಗುವ ರಬೀಅ್ ಕ್ಯಾಂಪ್ ಮತ್ತು ಕಿಟ್ ವಿತರಣಾ ಕಾರ್ಯಕ್ರಮ ಸುರತ್ಕಲ್ ವಲಯ ಎಸ್ ವೈ ಎಸ್ ವತಿಯಿಂದ ಚೊಕ್ಕಬೆಟ್ಟು ಎಸ್ ಕೆ ಎಸ್ಸೆಸ್ಸೆಪ್ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ ಸಮಸ್ತ ಸಂಘಟನೆಯು ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಮನೆ ಮಾತಾಗಿದೆ. ಕಾರ್ಯಕರ್ತರು ನಿಷ್ಠೆಯಿಂದ ಜನರ ಸೇವೆ ಮಾಡಬೇಕು ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಎಸ್ ವೈ ಎಸ್ ಕೇಂದ್ರೀಯ ಸದಸ್ಯ ಎಸ್ ಬಿ ದಾರಿಮಿ ಧರ್ಮದ ಅಮಾನವೀಯವಲ್ಲದ  ಪಾರಂಪರಿಕ ಆಚಾರ ವಿಚಾರಗಳಿಗೆ ಅದರದ್ದೇ ಆದ ತಿರುಳುಗಳು ಇದ್ದು ಅದನ್ನು ಅಲ್ಲಗೆಳೆಯುವುದರಿಂದ ನಾಸ್ತಿಕ ವಾದಕ್ಕೆ ಪುಷ್ಡಿ ನೀಡಿದಂತಾಗುತ್ತದೆ. ಸಾಮಾಜಿಕ ತಾಣದಲ್ಲಿ ತೋಚಿದ್ದನ್ನು ಗೀಚುವ ಪ್ರವೃತ್ತಿಯಿಂದ ವಿಶ್ವಾಸಿಗಳು ದೂರ ಉಳಿಯಬೇಕೆಂದು ಕರೆ ನೀಡಿದರು.
ವಲಯಾದ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ  ಮಾತನಾಡಿದರು.

ಕಾರ್ಯಕ್ರದ ಅಧ್ಯಕ್ಷತೆಯನ್ನು ಎಸ್‌ ವೈ ಎಸ್ ಚೊಕ್ಕಬೆಟ್ಟು ಶಾಖೆಯ ಅಧ್ಯಕ್ಷ  ಟಿ ಮುಹಮ್ಮದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಎಸ್ಕೆ, ನೂರ್ ಮುಹಮ್ಮದ್, ಹಮೀದ್ ಹಾಜಿ, ಜಮಾಅತ್ ಕಮಿಟಿ ಸದಸ್ಯ ಅಝೀಝ್ , ಶಿಹಾಬುದ್ದೀನ್, ಸಾದಿಕ್, ಖಲಂದರ್, ಅಬೂಬಕರ್ ಇಡ್ಯಾ, ಮುಹಮ್ಮದ್ ಇಡ್ಯ, ನೌಶಾದ್ , ಹೈದರ್ ಮುಸ್ಲಿಯಾರ್, ಬಾವ ಚೊಕ್ಕಬೆಟ್ಟು, ಇಮ್ರಾನ್ ಹಾಗೂ ಎಸ್ಕೆ ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಆಯ್ದ ಉಸ್ತಾದರಿಗೆ ದಿನಸಿ ಕಿಟ್ ವಿತರಿಸಲಾಯಿತು.  ಚೊಕ್ಕಬೆಟ್ಟು ಶಾಖೆ ಎಸ್ ಕೆ ಎಸ್ ಎಸ್ ಎಫ್ ಸಂಗ್ರಹಿಸಿದ ಯತೀಮ್ ಹೆಣ್ಮಗಳ ಹಣವನ್ನು ಜಿಲ್ಲೆಯ ಎಸ್ ವೈ ಎಸ್ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಎಸ್ಕೆ ಎಸ್ ಎಸ್ ಎಫ್ ವಲಯ ಉಪಾಧ್ಯಕ್ಷ ಕಮಾಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News