ಗೋಪಾಲ ಕೃಷ್ಣ ಕಾಮತ್ ನಿಧನ
Update: 2020-10-23 21:55 IST
ಮೂಡುಬಿದಿರೆ : ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಉದ್ಯೋಗಿ, ಮಾನವ ಸಂಪನ್ಮೂಲ ತರುಬೇತುದಾರ ಗೋಪಾಲಕೃಷ್ಣ ಕಾಮತ್ (64) ಕೀರ್ತಿನಗರದಲ್ಲಿರುವ ಸ್ವಗೃಹದಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು.
ಸಿಂಡಿಕೇಟ್ ಬ್ಯಾಂಕ್ ವಿವಿಧ ಶಾಖೆಗಳಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಮಣಿಪಾಲ ಶಾಖೆಯಲ್ಲಿ ಮುಖ್ಯ ಪ್ರಬಂಧಕರಾಗಿ ನಿವೃತ್ತಿ ಹೊಂದಿದ್ದರು. ಜೆಸಿಐ ಮೂಡುಬಿದಿರೆ ತ್ರಿಭುವನ್‍ನ ಮಾಜಿ ಅಧ್ಯಕ್ಷರಾಗಿದ್ದ ಅವರು ಜನಪ್ರಿಯ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿದ್ದರು. ಸುಮಾರು 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದರು. ಮೂಡುಬಿದಿರೆ ರೋಟರಿ ಕ್ಲಬ್‍ನ ಸಕ್ರಿಯ ಸದಸ್ಯರಾಗಿದ್ದರು. ಅವರು ಅವಿವಾಹಿತರಾಗಿದ್ದರು.