ನಮ್ಮೊಂದಿಗೆ ಬಾಂಧವ್ಯ ಹೊಂದಿರುವ ದೇಶಗಳ ಮೇಲೆ ಅಮೆರಿಕ ಒತ್ತಡ: ಚೀನಾ ಆರೋಪ

Update: 2020-10-23 18:03 GMT

ಬೀಜಿಂಗ್ (ಚೀನಾ), ಅ. 23: ನಿಮಗೆ ಬೇಕಾದ ಬಣವನ್ನು ಆರಿಸಿಕೊಳ್ಳಿ ಎಂಬುದಾಗಿ ಚೀನಾದೊಂದಿಗೆ ಬಾಂಧವ್ಯ ಹೊಂದಿರುವ ದೇಶಗಳ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ, ಆದರೆ ಇದು ಯಶಸ್ವಿಯಾಗುವುದಿಲ್ಲ ಎಂದು ಚೀನಾ ಹೇಳಿದೆ.

ಚೀನಾ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಹೇಳಿದರು.

ಅಪಾರದರ್ಶಕ ವ್ಯವಸ್ಥೆಯೊಂದನ್ನು ಆರಿಸಿಕೊಳ್ಳುವ ಬದಲು, ನಿಮ್ಮ ಆರ್ಥಿಕ ಸ್ವಾತಂತ್ರವನ್ನು ಕಾಪಾಡಿಕೊಳ್ಳಲು ‘ಕಠಿಣ, ಆದರೆ ಅಗತ್ಯ ಆಯ್ಕೆಗಳನ್ನು’ ಮಾಡಿಕೊಳ್ಳಿ ಎಂಬುದಾಗಿ ಅಮೆರಿಕವು ಶ್ರೀಲಂಕಾಕ್ಕೆ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಶ್ರೀಲಂಕಾದ ಮೇಲೆ ಚೀನಾದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶ್ರೀಲಂಕಾಕ್ಕೆ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News