ತನ್ಮಯ್ ಶ್ರೀವಾಸ್ತವ್ ಕ್ರಿಕೆಟ್‌ನಿಂದ ನಿವೃತ್ತಿ

Update: 2020-10-24 18:45 GMT

ಮುಂಬೈ: ಮಲೇಶ್ಯದಲ್ಲಿ 2008 ರಲ್ಲಿ ಅಂಡರ್-19 ವಿಶ್ವಕಪ್ ಜಯಿಸಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದ ತನ್ಮಯ್ ಶ್ರೀವಾಸ್ತವ್ 30ನೇ ವಯಸ್ಸಿನಲ್ಲಿ ಶನಿವಾರ ಕ್ರಿಕೆಟ್‌ನಿಂದ ನಿವೃತ್ತರಾದರು.

ಎಡಗೈ ಓಪನರ್ ಆಗಿರುವ ಶ್ರೀವಾಸ್ತವ್ ಅಂಡರ್-19 ವಿಶ್ವಕಪ್‌ನ ಆರು ಪಂದ್ಯಗಳಲ್ಲಿ 52.40 ಸರಾಸರಿಯಲ್ಲಿ 262 ರನ್ ಗಳಿಸಿದ್ದರು. ಕೌಲಾಲಂ ಪುರದಲ್ಲಿ ನಡೆದ ಫೈನಲ್‌ನಲ್ಲಿ ಅವರು 46 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಡಿ.ಎಲ್. ವಿಧಾನದಿಂದ 12 ರನ್‌ಗಳಿಂದ ಸೋಲಿಸಿತು.

   ನಂತರ ಶ್ರೀವಾಸ್ತವ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. 2008-09ರ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶದ ಪರ ಗರಿಷ್ಠ ರನ್ ಗಳಿಸಿದ್ದರು. ಕಳೆದ ಋತುವಿನಲ್ಲಿ ಅವರು ಉನ್ಮುಕ್ತ್ ಚಂದ್ ಬದಲಿಗೆ ಉತ್ತರಾಖಂಡ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು. 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶ್ರೀವಾಸ್ತವ್34.39 ಸರಾಸರಿಯಲ್ಲಿ 4,918 ರನ್ ಗಳಿಸಿದ್ದಾರೆ. 10 ಶತಕ ಮತ್ತು 27 ಅರ್ಧಶತಕಗಳನು ದಾಖಲಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 44 ಪಂದ್ಯಗಳಲ್ಲಿ 44.30 ರಲ್ಲಿ 1,728 ರನ್, ಏಳು ಶತಕ ಮತ್ತು 10 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News