ಅಜೇಯ ಖಬೀಬ್ ನೂರ್ ಮೊಹಮದೊವ್ ಯುಎಫ್ ಸಿಯಿಂದ ನಿವೃತ್ತಿ

Update: 2020-10-25 05:18 GMT

ಹೊಸದಿಲ್ಲಿ: ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್‌ನ ಸೂಪರ್ ಸ್ಟಾರ್ ಖಬೀಬ್ ನೂರ್ ಮೊಹಮದೊವ್ ಅಬುಧಾಬಿಯಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಯುಎಫ್‌ಸಿ ಲೈಟ್‌ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾದರು. ಪ್ರಶಸ್ತಿ ಉಳಿಸಿಕೊಂಡ ಬೆನ್ನಿಗೇ ತಾನು ಕ್ರೀಡೆಯಿಂದ ನಿವೃತ್ತಿಯಾಗುವುದಾಗಿಯೂ ಘೋಷಿಸಿದರು.

ಯುಎಫ್‌ಸಿ 254 ಸ್ಪರ್ಧೆಯ ಎರಡನೇ ಸುತ್ತಿನಲ್ಲಿ ಖಬೀಬ್  ಅವರು ಎದುರಾಳಿ  ಜಸ್ಟಿನ್ ಗೇತ್‌ಜೆ ರನ್ನು ಮಣಿಸಿದರು. ಗೆದ್ದ ಬಳಿಕ ಭಾವೋದ್ವೇಗಕ್ಕೆ ಒಳಗಾದ 32ರ ಹರೆಯದ ಖಬೀಬ್ ತನ್ನ ಕೈಗವಸುಗಳನ್ನು ತೆಗೆದು, "ಇದು ಯುಎಫ್‌ಸಿಯಲ್ಲಿ ನನ್ನ ಕೊನೆಯ ಹೋರಾಟ'' ಎಂದು ಘೋಷಿಸಿದರು.

ಖಬೀಬ್ ‌ಅವರ ತಂದೆ ಹಾಗೂ ತರಬೇತುದಾರ ಅಬ್ದುಲ್ ಮನಾಫ್ ಈ ವರ್ಷದ ಜುಲೈನಲ್ಲಿ ಕೊರೋನದಿಂದಾಗಿ ನಿಧನರಾಗಿದ್ದರು. ಜಸ್ಟಿನ್ ವಿರುದ್ಧ ಸ್ಪರ್ಧೆಯನ್ನು ಒಪ್ಪಿಕೊಳ್ಳುವ ಮೂರು ದಿನಗಳ ಮೊದಲು ತಾಯಿ ಬಳಿ ಮಾತನಾಡಿದ್ದೆ ಎಂದು ಖಬೀಬ್ ಹೇಳಿದರು.

ಅಮೆರಿಕದ ಜಸ್ಟಿನ್ ಅವರು ಲೆಗ್ ಕಿಕ್‌ಗಳ ಮೂಲಕ ಆರಂಭದಲ್ಲಿ ಸ್ಪರ್ಧೆಯೊಡ್ಡಿದರು. ಆದರೆ ಎರಡನೇ ಸುತ್ತಿನಲ್ಲಿ ಎದುರಾಳಿ ಜಸ್ಟಿನ್‌ರನ್ನು ನೆಲಕ್ಕುರುಳಿಸಿದ ಖಬೀಬ್ 29 ಪಂದ್ಯಗಳಲ್ಲೂ ಅಜೇಯ ದಾಖಲೆಯೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಎಂಎಂಎ ಫೈಟರ್ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News