ತುರೈಫ್ ನಲ್ಲಿ ಕ್ರಿಕೆಟ್ ಪಂದ್ಯಾಟ : ಜೀ ಯೀ ವಾರಿಯರ್ಸ್ ಪ್ರಥಮ

Update: 2020-10-25 06:44 GMT

ಸೌದಿ ಅರೇಬಿಯಾ : ತುರೈಫ್ ನಲ್ಲಿ ನಡೆದ ನಿಯಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಜೀ ಯೀ ವಾರಿಯರ್ಸ್‌ ಗೆಲುವು ಸಾಧಿಸಿದೆ.

ಸೆಮಿ ಪೈನಲಿನಲ್ಲಿ  ಬ್ಲ್ಯಾಕ್ ಫೈಟರ್ಸ್ ಮತ್ತು ರೋಯಲ್ ಸ್ಟ್ರೈಕರ್ಸ್ ನಡುವೆ ಮತ್ತು‌ ಬಾರಿಯ ಕಿಂಗ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ಪಂದ್ಯಾಟ ನಡೆಯಿತು. ಪೈನಲ್ ನಲ್ಲಿ ರೋಯಲ್ ಸ್ಟ್ರೈಕರ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ನಡೆದ ರೋಚಕ ಪಂದ್ಯದಲ್ಲಿ ಜೀ ಯೀ ವಾರಿಯರ್ಸ್‌ ಗೆಲುವು ಸಾಧಿಸಿತು. ರೋಯಲ್ ಸ್ಟ್ರೈಕರ್ಸ್ ರನ್ನರ್ ಅಪ್ ಮತ್ತು ಹಲವು ಪ್ರಶಸ್ತಿಗಳನ್ನು ಪಡೆಯಿತು.

ಅಫ್ಝಲ್ ಗಂಟಲ್ ಕಟ್ಟೆ ಮ್ಯಾನ್ ಆಫ್ ದಿ ಸೀರೀಸ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಇಮ್ರಾನ್ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಸೌಹಾನ್ ಅತ್ಯುತ್ತಮ ಫೀಲ್ಡರ್ , ಶಹೀರ್ ಬೋಂದೆಲ್ ಅತ್ಯುತ್ತಮ ಕೀಪರ್, ಅಲ್ತಾಫ್ ಅತ್ಯುತ್ತಮ ಬೌಲರ್ ಪ್ರಶಸ್ತಿಗಳನ್ನು ಪಡೆದರು.

ಅತ್ಯುತ್ತಮ ನ್ಯಾಯೋಚಿತ ತಂಡವಾಗಿ ಬ್ಲ್ಯಾಕ್ ಫೈಟರ್ಸ್ ನ‌ ಸಫ್ವಾನ್ ಬಜ್ಪೆ ಪ್ರಶಸ್ತಿ ಪಡೆದರು. ಪಂದ್ಯಾಟದಲ್ಲಿ ಪ್ರೇಕ್ಷಕರಿಗೆ ಕೂಪನ್ ಎತ್ತುವ ಮೂಲಕ ವಿವಿಧ ಆಕರ್ಷಕ ಬಹುಮಾನ ನೀಡಲಾಯಿತು. ಮುಹ್ಸಿನ್ ಕೊಡಗು ಮತ್ತು ಜುನೈದ್ ಫಾಯಿಝ್ ಪಂದ್ಯಾಟದ ಕಾಮೆಟಂರಿ ನಿರ್ವಹಿಸಿದರು. ಜುನೈದ್ ಫಾಯಿಝ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರ್ವಹಣೆ ಮಾಡಿದರು.

ಪಂದ್ಯಾಟದ ಪ್ರಾಯೋಜಕರಾಗಿ ಗೋಲ್ಡನ್ ಡ್ಯೂನ್ ಆ್ಯಂಡ್ ಝೈದ್  ಹೋಟೆಲ್, ಮೆಕ್ ವೆಲ್, ಸುಮೋ ಸೌದಿ ಅರೇಬಿಯಾ, ಟ್ರಾನ್ಸೆಂಟ್ ಅರೇಬಿಯಾ ಕಾಂಟ್ರಾಕ್ಟ್ ಕಂಪೆನಿಗಳು ಸಹಕರಿಸಿತು.

ಇಬ್ರಾಹಿಮ್ ಸಾಲೆತ್ತೂರು(TNET), ಶಿಹಾಬ್ ಜಾರಿಗೆಬೈಲು, ನೌಫಲ್ ಮೂಳೂರು, ಅಫ್ಝಲ್, ಶಹೀರ್ ಕಾರ್ಯಕ್ರಮದ ಆಯೋಜನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News